Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Discussion in 'Kannada Film Discussion' started by madesha, Nov 1, 2007.

 1. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  783
  Likes Received:
  1,080
  Trophy Points:
  93
  ನೂರು ಸಿನಿಮಾ ಪೂರೈಸಿದ ರಾಜ್
  = = = = = = =

  ಬೇಡರ ಕಣ್ಣಪ್ಪ ಚಿತ್ರದ ನಾಯಕ ನಟರಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆನಿಂತ ರಾಜಕುಮಾರ್ ಇಡೀ ಕನ್ನಡ ಚಿತ್ರೋದ್ಯಮದ ಆಧಾರವಾಗಿ ಬೆಳೆದದ್ದು ಈಗ ಇತಿಹಾಸ. ಕನ್ನಡ ಚಿತ್ರಲೋಕ ಅಡೆತಡೆಗಳನ್ನು ಎದುರಿಸಿ ಸ್ವಂತ ನೆಲೆ ಕಂಡುಕೊಳ್ಳುವಾಗ, ಎಡಬಿಡದೆ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ರಾಜಕುಮಾರ್ ಹೆಗ್ಗಳಿಕೆ. ಪೌರಾಣಿಕ, ಜಾನಪರ, ಸಾಮಾಜಿಕ, ಐತಿಹಾಸಿಕ, ಹೀಗೆ ಎಲ್ಲಾ ಬಗೆಯ ಚಿತ್ರಗಳಲ್ಲೂ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ ವಿಶೇಷತೆ ರಾಜಕುಮಾರ್ ಅವರದು ಕನ್ನಡದ ಬಹುತೇಕ ಎಲ್ಲ ಪ್ರಮುಖ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದು ರಾಜ್ ಅವರ ಮತ್ತೊಂದು ವಿಶೇಷತೆ.

  ಒಂದು ದಶಕದ ಅವಧಿಯಲ್ಲಿ ಕನ್ನಡದಲ್ಲಿ ತಯಾರಾಗುತ್ತಿದ್ದ ಶೇ. 70 ರಷ್ಟು ಚಿತ್ರಗಳಲ್ಲಿ ರಾಜಕುಮಾರ್ ಅವರೇ ನಾಯಕರಾಗಿರುತ್ತಿದ್ದರು. ರಂಗಭೂಮಿಯಲ್ಲಿ ಸಾಮು ತೆಗೆದು ಚಿತ್ರರಂಗದಲ್ಲಿ ವೈವಿಧ್ಯ ಪಾತ್ರಗಳಲ್ಲಿ ಕಾಣಿಸಿಕೊಂಡ ರಾಜಕುಮಾರ್ ಶತಚಿತ್ರ ಪೂರೈಸಿದ ಮೊದಲ ಕಲಾವಿದ ಎನಿಸಿಕೊಂಡಿದ್ದು ಭಾಗ್ಯದ ಬಾಗಿಲು (1968) ಚಿತ್ರದ ಮೂಲಕ. ನೂರು ಚಿತ್ರಗಳಲ್ಲಿ ಕಾಣಿಸಿಕೊಂಡ ರಾಜ್ ಗೌರವಾರ್ಥ ಕಂಠೀರವ ಕ್ರೀಡಾಂಗದಲ್ಲಿ ಅವರಿಗೆ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರು ಪಾಲ್ಗೊಂಡಿದ್ದರು.

  ಇದೇ ವರ್ಷ ಕನ್ನಡಕ್ಕೆ ಮೊದಲ ಬಾಂಡ್ ಚಿತ್ರ ಜೇಡರ ಬಲೆ ತೆರೆಗೆ ಬಂತು. ದೊರೈ ಭಗವಾನ್ ನಿರ್ದೇಶನದಲ್ಲಿ ರಾಜ್ ಅಭಿನಯಿಸಿದ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತು. ಇದೇ ಅವಧಿಯಲ್ಲಿ ಸಾಹಿತಿ ಚದುರಂಗ ರವರು ರಾಜ್ ಜೊತೆಗೂಡಿ ಸರ್ವಮಂಗಳ ಚಿತ್ರ ನಿರ್ಮಿಸಿದರು. ಗೀತ ರಚನಕಾರರಾಗಿ ಹೆಸರಾಗಿದ್ದ ಗೀತಪ್ರಿಯ ರವರು ಸ್ವತಂತ್ರವಾಗಿ ಮಣ್ಣಿನ ಮಗ ಚಿತ್ರ ನಿರ್ದೇಶಿಸಿದರು. ಸಿ.ವಿ. ಶಿವಶಂಕರ್ ನಿರ್ದೇಶನದಲ್ಲಿ ತಯಾರಾದ ನಮ್ಮ ಊರು ಚಿತ್ರದಲ್ಲಿ ಮತ್ತೊಬ್ಬ ನಾಯಕ ನಟ ಬೆಳ್ಳಿ ತೆರೆಗೆ ಪರಿಚಯವಾದರು ಅವರೇ ರಾಜೇಶ್.

  ಜೇಡರ ಬಲೆ ಯಿಂದ ಉತ್ತೇಜಿತರಾದ ದೊರೈ ಭಗವಾನ ರವರು ಅದೇ ವರ್ಷ 1968 ರಲ್ಲಿ ತಯಾರಾದ ಗೋವಾದಲ್ಲಿ ಸಿ.ಐ.ಡಿ. 999 ತೆರೆಗಿತ್ತರು. ಈ ಚಿತ್ರದಲ್ಲಿ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ನಟಿ ರೇಖಾ ಈ ಚಿತ್ರದ ನಾಯಕಿ. ಚಿತ್ರ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಆರ್.ಎನ್. ಜಯಗೋಪಾಲ್ ರವರು ರಾಜ್ ನಾಯಕತ್ವದಲ್ಲಿ ಧೂಮಕೇತು ಚಿತ್ರವನ್ನು ನಿರ್ದೇಶಿಸಿ ಭರವಸೆ ಮೂಡಿಸಿದರು. ಕನ್ನಡ ಚಿತ್ರಗಳ ಬೆಳೆ ಹುಲುಸಾಗಿ ಬೆಳೆಯುತ್ತಿದ್ದ ಕಾಲ ಅದು. ಹಿರಿಯ ನಿರ್ದೇಶಕ ಎಂ.ಆರ್. ವಿಠಲ್ ರವರು ಹಣ್ಣೆಲೆ ಚಿಗುರಿದಾಗ ತೆರೆಗಿತ್ತರು. ಆರ್. ನಾಗೇಂದ್ರ ರಾವ್ ರವರು ಈ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು. ಹುಣಸೂರು ಕೃಷ್ಣಮೂರ್ತಿ ರವರು ಅಡ್ಡದಾರಿ ಚಿತ್ರ ನಿರ್ದೇಶಿಸಿ ನಟಿಸಿದರು. ಇದೇ ವರ್ಷ ಟಿ.ವಿ. ಸಿಂಗ್ ಠಾಕೂರ್ ಮತ್ತು ಜಿ.ವಿ. ಅಯ್ಯರ್ ಒಟ್ಟಾಗಿ ನಾನೇ ಭಾಗ್ಯವತಿ ಸಿನಿಮಾ ನಿರ್ದೇಶಿಸಿದರು.

  ಪ್ರವಾಸಿ ಮಂದಿರ ಚಿತ್ರದೊಂದಿಗೆ ನಟ ಕಲ್ಯಾಣ ಕುಮಾರ್ ರವರು ನಿರ್ದೇಶಕರಾಗಿದ್ದು ವಿಶೇಷ. ಬಿ.ಆರ್. ಪಂತುಲು ರವರು ತಮ್ಮ ಪದ್ಮಿನಿ ಲಾಂಛನದಲ್ಲಿ ಅಮ್ಮ ನಿರ್ಮಿಸಿ ಬಿಡುಗಡೆ ಮಾಡಿದರು. ವೈ.ಆರ್. ಸ್ವಾಮಿ ರವರು ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ತೆರೆಗೆ ಅರ್ಪಿಸಿದರು. ಕನ್ನಡ ಚಲನಚಿತ್ರ ಜಗತ್ತು ಆವರಿಸಿರುವ ಗಾಂಧಿನಗರ ಕುರಿತು ಚಿತ್ರ ತಯಾರಾಗಿದ್ದು ಇವೇ ಅವಧಿಯಲ್ಲಿ. ಚಿತ್ರನಗರಿಯ ಒಳಹೊರಗುಗಳನ್ನು ನವೀರಾಗಿ ನಿರೂಪಿಸಿದ ಚಿತ್ರವಿದು.

  ಪುಟ್ಟ ಉದ್ಯೋಗ ಅರಸುತ್ತ ಬೆಂಗಳೂರಿಗೆ ಬಂದು ಚಿತ್ರೋದ್ಯಮಿಯಾಗಿ ಬೆಳೆದ ಎ.ಎಲ್. ಅಬ್ಬಯ್ಯ ನಾಯ್ಡು ಸ್ವಂತ ಚಿತ್ರ ನಿರ್ಮಿಸಿದ್ದು ಇದೇ ವರ್ಷ. ಎ.ವಿ. ಶೇಷಗಿರಿ ರಾವ್ ನಿರ್ದೇಶನದಲ್ಲಿ ಹೊರ ಬಂದ ಹೂವು ಮುಳ್ಳು ಅಬ್ಬಯ್ಯ ನಾಯ್ಡು ರವರು ಮಧು ಆರ್ಟ್ಸ್ ಫಿಲಂ ನ ಮೊದಲ ಚಿತ್ರ. ಕನ್ನಡದ ಪ್ರಥಮ ಶತಚಿತ್ರ ನಟ ರಾಜ ಕುಮಾರ್ ಜೀವನಗಾಥೆಯನ್ನು ಒಳಗೊಮಡ ನಟ ಸಾರ್ವಭೌಮ ಸಿನಿಮಾ ತಯಾರಾಯ್ತು. ಆರೂರು ಪಟ್ಟಾಭಿ ಈ ಚಿತ್ರ ನಿರ್ದೇಶಿಸಿದ್ದರು.
   
  Sridhar Gowda likes this.
 2. Jeevaa

  Jeevaa aDDa Junior

  Joined:
  Oct 24, 2018
  Messages:
  1,494
  Likes Received:
  1,672
  Trophy Points:
  113
  Location:
  Bangalore
 3. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  783
  Likes Received:
  1,080
  Trophy Points:
  93
  Annavra Dropped movie[​IMG]
   
 4. Arvi

  Arvi Moderator Staff Member

  Joined:
  Nov 7, 2012
  Messages:
  50,208
  Likes Received:
  15,646
  Trophy Points:
  113
  Location:
  Shivu aDDa
 5. Arvi

  Arvi Moderator Staff Member

  Joined:
  Nov 7, 2012
  Messages:
  50,208
  Likes Received:
  15,646
  Trophy Points:
  113
  Location:
  Shivu aDDa
 6. Arvi

  Arvi Moderator Staff Member

  Joined:
  Nov 7, 2012
  Messages:
  50,208
  Likes Received:
  15,646
  Trophy Points:
  113
  Location:
  Shivu aDDa
 7. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  783
  Likes Received:
  1,080
  Trophy Points:
  93
  ಸಿನಿಮಾ ಸ್ಥಿರ ಚಿತ್ರ ಛಾಯಾಗ್ರಾಹಕರ ಕಣ್ಣಲ್ಲಿ ಅಣ್ಣಾವ್ರು.
  = = = = = = =

  ಸಿನಿಮಾ ಛಾಯಾಗ್ರಾಹಕರು ತಮ್ಮ ಕ್ಯಾಮೆರಾದಲ್ಲಿ ರಾಜ್ ರನ್ನು ಸೆರೆ ಹಿಡಿದ ಸಂದರ್ಭ, ಅವರೊಂದಿಗಿನ ಒಡನಾಟವನ್ನು ನೆನಪು ಮಾಡಿಕೊಂಡಿದ್ದಾರೆ.

  1) ಅಣ್ಣಾವ್ರೇ ಐಡಿಯಾ ಕೊಟ್ಟರು – ಭವಾನಿ ಲಕ್ಷ್ಮಿ ನಾರಾಯಣ

  ಫ್ರೀಲ್ಯಾನ್ಸ ಫೋಟೋಗ್ರಾಫರ್ ಆದ ನಾನು ವಿವಿಧ ಪತ್ರಿಕೆಗಳಿಗೆ ಸಿನಿಮಾ ಫೋಟೋಗಳನ್ನು ಕೊಡುತ್ತಿದ್ದೆ. ಆಗ ಬೆಂಗಳೂರಿನಲ್ಲಿ ಚಾಮುಂಡೇಶ್ವರಿ, ಕಂಠೀರವ ಸ್ಟುಡಿಯೋಗಳಲ್ಲಿ ಹೆಚ್ಚಾಗಿ ಚಿತ್ರೀಕರಣ ನಡೆಯುತ್ತಿದ್ದುದು, ಕಲಾವಿದರ ಊಟದ ಬಿಡುವಿನ ಹೊತ್ತಿಗೆ ಸರಿಯಾಗಿ ನಾನು ಹೋಗುತ್ತಿದ್ದೆ. ಅಂಥದ್ದೊಂದು ದಿನ ಕಂಠೀರವ ಸ್ಟುಡಿಯೋದಲ್ಲಿ ಭಲೇ ಹುಚ್ಚ ಚಿತ್ರೀಕರಣ ನಡೆಯುತ್ತಿತ್ತು. ಚಿ. ಉದಯಶಂಕರ್ ಕಥೆ, ಚಿತ್ರಕಥೆ ಬರೆದಿದ್ದ ಈ ಚಿತ್ರದ ನಿರ್ದೇಶಕರು ವೈ.ಆರ್. ಸ್ವಾಮಿ. ನಾನು ಸ್ಟುಡಿಯೋಗೆ ಹೋದಾಗ, ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದ ರಾಜ್, ಆರತಿ ಒಳ್ಳೆಯ ಮೂಡ್ ನಲ್ಲಿದ್ದಂತಿತ್ತು. ನನ್ನನ್ನು ನೋಡುತ್ತಲೇ ರಾಜ್ ಯಾವ ರೀತಿ ಫೋಸ್ ಬೇಕೆಂದು ಕೇಳಿದರು. ನೀವೇ ಐಡಿಯಾ ಮಾಡಿ ಅಂತ ನಾನು ತಮಾಷೆಗೆ ಹೇಳಿದೆನು. ಇದನ್ನು ಗಂಭೀರವಾಗಿ ತೆಗೆದುಕೊಂಡ ರಾಜ್ ರವರು ನಟಿ ಆರತಿಗೆ ಸಲಹೆ ಸೂಚನೆ ನೀಡತೊಡಗಿದರು. ರಾಜ್ ಹೇಳಿದಂತೆ ಅವರೊಂದಿಗೆ ಆರತಿ ನಿಲ್ಲುತ್ತಿದ್ದರು. ನಾನು ಕ್ಲಿಕ್ಕಿಸುತ್ತಾ ಹೋದೆ. ಒಂದು ಸಂದರ್ಭದಲ್ಲಿ ರಾಜ್ ತಲೆಕೆಳಗೆ ಮಾಡಿ ಶೀರ್ಷಾಸನ ಹಾಕಿಬಿಟ್ಟರು. ಯೋಗಪಟು ರಾಜ್ ಗೆ ಅದು ರೀರಾ ಸಲೀಸಾದ ಭಂಗಿ. ಥ್ಯಾಂಕ್ಸ್ ಸರ್ ಎಂದು ಫೋಟೋ ಕ್ಲಿಕ್ಕಿಸಿದೆ.

  = = = = = = =

  ರಾಷ್ಟ್ರೀಯ ರಕ್ಷಣಾ ನಿಧಿ ಸಂಗ್ರಹ – ಪ್ರಗತಿ ಅಶ್ವಥ್ ನಾರಾಯಣ

  ಅದು 1972 ರ ಭಾರತ ಪಾಕಿಸ್ತಾನ ಯುದ್ಧದ ಸಂದರ್ಭ. ಗಡಿಯಲ್ಲಿ ಹೋರಾಟ ನಡೆಸುತ್ತಿದ್ದ ಸೈನಿಕರಿಗೆ ನೆರವಾಗಲು ಕನ್ನಡ ಚಿತ್ರರಂಗವೂ ನಿಶ್ಚಯಿಸಿತು. ಕನ್ನಡದ ಕಲಾವಿದರು ಹಾಗೂ ತಂತ್ರಜ್ಞರು ಕೇಂದ್ರ ರಕ್ಷಣಾ ಇಲಾಖೆಗೆ ನೆರವಾಗಲು ಹಣ ಸಂಗ್ರಹಕ್ಕೆ ಮುಂದಾದರು. ಕಲಾವಿದರನ್ನು ಕರೆದೊಯ್ಯಲು ಎರಡು ಬಸ್ ಗಳು ಸಿದ್ದವಾಗಿ ನಿಂತವು. ರಕ್ಷಣಾ ನಿಧಿ ಸಂಗ್ರಹಕ್ಕೆ ಚಾಲನೆ ಸಿಕ್ಕಿದ್ದು ಹೈಲ್ಯಾಂಡ್ ಹೋಟೆಲ್ ನಿಂದ. ಎಲ್ಲರೂ ಉತ್ಸಾಹದಿಂದ ರಾಜ್ಯಾದ್ಯಂತ ಒಂದು ವಾರ ಕಾಲ ಸಂಚಾರ ನಡೆಸಿದರು. ಅವರೊಂದಿಗೆ ನಾನೂ ಇದ್ದೆ. ದಾರಿಯುದ್ದಕ್ಕೂ ಕಲಾವಿದರ ಹರಟೆ, ಮಿಮಿಕ್ರಿ, ಹಾಡು, ಪಾಡು ನಡೆದೇ ಇತ್ತು. ಭೇಟಿ ಕೊಟ್ಟ ನಗರ, ಪಟ್ಟಣ ಪ್ರದೇಶಗಳಲ್ಲಿ ಅಭಿಮಾನಿಗಳೇ ಕಲಾವಿದರಿಗೆ ಊಟದ ವ್ಯವಸ್ಥೆ ಮಾಡಿದ್ದರು. ನಾನು ಅಲ್ಲಿದ್ದ ಒಂದು ಕುರ್ಚಿ ಹತ್ತಿ ಫೋಟೋ ತೆಗೆಯುತ್ತಿದ್ದೆ. ಜನಜುಂಗಳಿ ಜಾಸ್ತಿಯಾಗಿ ನೂಕು ನುಗ್ಗಲು ಉಂಟಾಗಿದ್ದರಿಂದ ಕುರ್ಚಿಮೇಲಿದ್ದ ನನಗೆ ಆಯ ತಪ್ಪಿತು. ಇನ್ನೇನು ಕೆಳಗೆ ಬೀಳಬೇಕೆನ್ನುವ ಹೊತ್ತಿಗೆ ರಾಜ್ ಹಿಡಿದುಕೊಂಡರು. ಅಯ್ಯೋ ಇದೇನ್ರಿ, ಇಷ್ಟು ಕಷ್ಟಪಟ್ಟು ಫೋಟೋ ತೆಗೀಬೇಕಾ, ಇಳೀರಿ ಮೊದಲು ಎನ್ನುತ್ತಾ ಪಕ್ಕಕ್ಕೆ ಕರೆದುಕೊಂಡರು. ಹೀಗೆ ಅಂದಿನ ನಿಧಿ ಸಂಗ್ರಹದ ದಿನಗಳು ಮನಸ್ಸಿನಲ್ಲಿ ಅಚ್ಚೊತ್ತಿವೆ. ರಾಜ್ಯ ಸಾವಿರಾರು ಕಿಲೋ ಮೀಟರ್ ರಸ್ತೆ ಸವೆಸಿದ ಕಲಾವಿದರಿಗೆ ಜನರೂ ಉತ್ತಮ ರೀತಿಯಲ್ಲಿ ಸ್ಪಂದಿಸಿದರು.

  = = = = = =

  ನಿಮ್ಗೆ ಒಳ್ಳೇದಾಗುತ್ತ – ಮನು

  ಆಗಷ್ಟೇ ನನ್ನ ವೃತ್ತಿ ಜೀವನ ಶುರುವಾಗಿತ್ತು. ಸಿನಿಮಾ ಪತ್ರಿಕೆಯೊಂದರ ಛಾಯಾಗ್ರಾಹಕನಾಗಿ ಕೆಲಸಕ್ಕೆ ಸೇರಿದ್ದೆ. ರಾಜ್ ರ ಸದಾಶಿವ ನಗರದ ಮನೆಯಲ್ಲಿ ಅವರ ಹುಟ್ಟು ಹಬ್ಬದ ಸಮಾರಂಭ ನಡೆದಿತ್ತು. ರಾಜ್ ಕೊಂಚ ಬಿಡುವಾಗಿದ್ದಾಗ ನಾನು ಅವರಲ್ಲಿಗೆ ಹೋಗಿ, ಸಾರ್ ನಾನು ಛಾಯಾಗ್ರಾಹಕನಾಗಿ ಸಿನಿಮಾ ಪತ್ರಿಯೊಂದಕ್ಕೆ ಸೇರಿದ್ದೇನೆ ಎಂದು ಪರಿಚಯಿಸಿಕೊಂಡೆ. ಆಗ ಅವರು ಓ ಒಳ್ಳೇಯದು, ನೀವು ಒಳ್ಳೇ ಸಮಯದಲ್ಲಿ ಉದ್ಯಮಕ್ಕೆ ಬಂದಿದ್ದೀರಿ. ಖಂಡಿತ ನಿಮ್ಗೆ ಒಳ್ಳೇದಾಗುತ್ತೆ ಎಂದು ಆತ್ಮೀಯತೆಯಿಂದ ಹಾರೈಸಿದರು. ಅಲ್ಲಿಂದ ಮುಂದೆ ಹಲವಾರು ಸಂದರ್ಭಗಳಲ್ಲಿ ಅವರೇ ನನ್ನನ್ನು ಗುರುತಿಸಿ ಮಾತನಾಡಿಸುತ್ತಿದ್ದರು. ಶಿವರಾಜ್ ಕುಮಾರ್ ಅಭಿನಯದ ರಾಕ್ಷಸ ಚಿತ್ರದ ಮುಹೂರ್ತಕ್ಕೆ ರಾಜ್ ಕುಮಾರ್ ದಂಪತಿ ಬಂದಾಗಿನ ಸಂದರ್ಭವೊಂದು ನೆನಪಾಗುತ್ತದೆ. ಮುಹೂರ್ತದಲ್ಲಿ ದೇವರಿಗೆ ನಮಸ್ಕರಿಸಿದ ರಾಜ್, ಅಲ್ಲೇ ಇದ್ದ ನಾವು ಹಾಗೂ ಇತರೆ ಛಾಯಾಗ್ರಾಹಕರತ್ತ ನೋಡಿ ಆತ್ಮೀಯವಾಗಿ ನಕ್ಕರು. ಹಣೆಯಲ್ಲಿ ಕುಂಕುಮ ಇದ್ದರೆ ಚೆನ್ನಾಗಿರುತ್ತೆ ಎಂದೆವು ನಾವು. ಕೂಡಲೇ ಪಾರ್ವತಮ್ಮನವರು ರಾಜ್ ಹಣೆಗೆ ಕುಂಕುಮ ಇಟ್ಟರು. ಈ ಅಪರೂಪದ ಸಂದರ್ಭವನ್ನು ನನ್ನ ಕ್ಯಾಮೆರಾದಲ್ಲಿ ದಾಖಲಿಸಿಕೊಂಡೆನು.

  = = = = = = = =

  ಅಣ್ಣಾವ್ರ ಫೋಟೋ ಶೂಟ್ – ಪ್ರವೀಣ್ ನಾಯಕ್

  ಪರಶುರಾಮ್ ಚಿತ್ರದ ನಂತರ ರಾಜ್ ಕುಮಾರ್ ರವರು ಬಣ್ಣ ಹಚ್ಚಿದ್ದು ಜೀವನ ಚೈತ್ರ (1992) ಚಿತ್ರಕ್ಕೆ. ಈ ಚಿತ್ರಕ್ಕೆ ತಯಾರಿ ನಡೆಯುತ್ತಿದ್ದಾಗ ಪಾರ್ವತಮ್ಮ ರಾಜ್ ಕುಮಾರ್ ರವರಿಂದ ನನಗೆ ಕರೆ ಬಂದಿತು. ಚಿತ್ರದ ಮುಹೂರ್ತ ನಡೆಸುವುದಕ್ಕೆ ಮುನ್ನ ತಮ್ಮದೊಂದು ಫೋಟೋಶೂಟ್ ಆಗಲಿ ಎಂದಿದ್ದರಂತೆ ರಾಜ್. ಆಗಲೇ ಇನ್ನೂರು ಚಿತ್ರಗಳನ್ನು ಮಾಡಿದ್ದ ಮೇರು ತಾರೆ ಅವರು. ಮೇಕಪ್ ಹಾಕಿಕೊಂಡು ನೇರವಾಗಿ ಕ್ಯಾಮೆರಾ ಎದುರು ನಿಲ್ಲಬಹುದಿತ್ತು. ಆದರೆ ರಾಜ್ ಹಾಗಲ್ಲ. ಶ್ರದ್ಧೆ, ಭಕ್ರಿಯಿಂದ ತಮ್ಮ ಹೊಸ ಚಿತ್ರಕ್ಕೆಂದು ಅವರು ತಯಾರಿ ನಡೆಸಿದ್ದ ಪರಿ ನನ್ನಲ್ಲಿ ಅಚ್ಚರಿ ಮೂಡಿಸಿತ್ತು.

  ಸರಿ ನಾನು ಕ್ಯಾಮೆರಾದೊಂದಿಗೆ ಸದಾಶಿವ ನಗರದ ಮನೆಗೆ ಹೋದೆ. ನನ್ನನ್ನು ಎದುರುಗೊಂಡ ಪಾರ್ವತಮ್ಮನವರು ನೋಡಪ್ಪಾ ಇವರು ಸಿನ್ಮಾ ಮಾಡೋದಿಲ್ಲ ಅಂತ ಕೂತಿದ್ದಾರೆ. ಸ್ವಲ್ಪ ಯಂಗ್ ಆಗಿ ಕಾಣೋವಂತೆ ಫೋಟೋ ತೆಗಿ, ವಯಸ್ಸಾದವರಂತೆ ಕಾಣಿಸಿದರೆ ಮತ್ತೆ ನಟನೆ ಮಾಡೋಲ್ಲ ಅಂತಾರೆ ಎಂದರು. ಆದರೆ ಫೋಟೋಶೂಟ್ ಸಂದರ್ಭದಲ್ಲಿ ನನಗಾದ ಅನುಭವವೇ ಬೇರೆ. ಒಂದೊಂದು ಡ್ರೆಸ್ ಹಾಕಿದಾಗಲೂ ರಾಜ್ ಪರ್ಸಾನಲಿಟಿ ಚೇಂಜ್ ಆಗುತ್ತಿತ್ತು. ಸೂಟ್ ಹಾಕಿದಾಗ ಡಿಗ್ನಿಫೈಡ್ ಲುಕ್. ಇನ್ನೂ ಜೀನ್ಸ ಪ್ಯಾಂಟ್ ನಲ್ಲಿ ಅದರ ಕ್ಲಾಸೇ ಬೇರೆ. ಬನಿಯನ್ ತೊಟ್ಟು ಸ್ಪೋರ್ಟ್ಸ್ ಶೂ ಹಾಕಿ ನಿಂತಾಗ ಯೂಥ್ ಫೀಲ್. ಗೆಟಪ್ ಗೆ ಹೊಂದುವಂತೆ ಲುಕ್ ನಲ್ಲೂ ಟ್ರಾನ್ಸಫಾರ್ಮೇಶನ್ ಸಿಗುತ್ತಿತ್ತು. ಆಗ ಅವರಿಗೆ ಬಹಳವೇನಿಲ್ಲ ಅರವತ್ತೆರಡು ವರ್ಷ

  ಮೇಲಿನ ಛಾಯಾಗ್ರಹಕರಿಗೆ ಅನುಕ್ರಮವಾಗಿ ಭಾವಚಿತ್ರಗಳು
   
  JAMES™ and Sridhar Gowda like this.
 8. Arvi

  Arvi Moderator Staff Member

  Joined:
  Nov 7, 2012
  Messages:
  50,208
  Likes Received:
  15,646
  Trophy Points:
  113
  Location:
  Shivu aDDa
 9. Jeevaa

  Jeevaa aDDa Junior

  Joined:
  Oct 24, 2018
  Messages:
  1,494
  Likes Received:
  1,672
  Trophy Points:
  113
  Location:
  Bangalore
  [​IMG]

  Sent from my Redmi 4 using Tapatalk
   
 10. Arvi

  Arvi Moderator Staff Member

  Joined:
  Nov 7, 2012
  Messages:
  50,208
  Likes Received:
  15,646
  Trophy Points:
  113
  Location:
  Shivu aDDa
 11. Arvi

  Arvi Moderator Staff Member

  Joined:
  Nov 7, 2012
  Messages:
  50,208
  Likes Received:
  15,646
  Trophy Points:
  113
  Location:
  Shivu aDDa
 12. Arvi

  Arvi Moderator Staff Member

  Joined:
  Nov 7, 2012
  Messages:
  50,208
  Likes Received:
  15,646
  Trophy Points:
  113
  Location:
  Shivu aDDa
 13. Arvi

  Arvi Moderator Staff Member

  Joined:
  Nov 7, 2012
  Messages:
  50,208
  Likes Received:
  15,646
  Trophy Points:
  113
  Location:
  Shivu aDDa
 14. Arvi

  Arvi Moderator Staff Member

  Joined:
  Nov 7, 2012
  Messages:
  50,208
  Likes Received:
  15,646
  Trophy Points:
  113
  Location:
  Shivu aDDa
 15. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  783
  Likes Received:
  1,080
  Trophy Points:
  93
 16. Arvi

  Arvi Moderator Staff Member

  Joined:
  Nov 7, 2012
  Messages:
  50,208
  Likes Received:
  15,646
  Trophy Points:
  113
  Location:
  Shivu aDDa
 17. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  783
  Likes Received:
  1,080
  Trophy Points:
  93
 18. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  783
  Likes Received:
  1,080
  Trophy Points:
  93

Share This Page