Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Discussion in 'Kannada Film Discussion' started by madesha, Nov 1, 2007.

 1. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  972
  Likes Received:
  1,338
  Trophy Points:
  93
 2. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  972
  Likes Received:
  1,338
  Trophy Points:
  93
  ಅಭಿಮಾನಿ ದೇವರುಗಳೇ

  ಸಿನಿಮಾದ ಇತಿಹಾಸದಲ್ಲೇ ಅಣ್ಣಾವ್ರು ಅವರಷ್ಟು ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಯಾವೊಬ್ಬ ನಟರೂ ನಟಿಸಿಲ್ಲ...

  ಕನ್ನಡ ಚಿತ್ರರಂಗದ ಮೊದಲ ಕಾದಂಬರಿ ಆಧಾರಿತ ಚಿತ್ರ ಕರುಣೆಯೇ ಕುಟುಂಬದ ಕಣ್ಣು ಇಂದ ತಮ್ಮ ಕೊನೆಯ ಚಿತ್ರ ಶಬ್ಧವೇಧಿ ವರೆಗೂ ಅಣ್ಣಾವ್ರು 29 ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಿದ್ದಾರೆ. ಇದು ಸಾರ್ವಕಾಲಿಕ ದಾಖಲೆ...‍♂️

  ಅಣ್ಣಾವ್ರು ಬಿಡುವಿನ ಸಮಯದಲ್ಲಿ ಕಾದಂಬರಿ ಪುಸ್ತಕಗಳು ಓದುವುದು ಹೆಚ್ಚು ಆಸಕ್ತಿ ತೋರಿಸುತ್ತಿದ್ದರು...

  ಜೈ ರಾಜಣ್ಣ [​IMG]
   
  Sridhar Gowda likes this.
 3. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  972
  Likes Received:
  1,338
  Trophy Points:
  93
 4. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  972
  Likes Received:
  1,338
  Trophy Points:
  93
 5. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  972
  Likes Received:
  1,338
  Trophy Points:
  93
  ರಾಜಕುಮಾರರಿಗೆ ಮೊದಲಿನಿಂದಲೂ ಊಟ ತಿಂಡಿ ಅಂದರೆ ಬಹಳ ಆಸೆ ..
  ಅವರ ಮನೆಯ ಬಳಿ ಮೇಖ್ರಿ ಸರ್ಕಲ್ನಲ್ಲಿ ಒಬ್ಬ ಟೀ ಅಂಗಡಿ ಇಟ್ಟುಕೊಂಡಿದ್ದ.ಅವನು ಬಹಳ ಚೆನ್ನಾಗಿ ಟೀ ಮಾಡುತ್ತಿದ್ದನಂತೆ ..
  ಒಮ್ಮೆ ಇವರಿಗೆ ಟೀ ಕುಡಿಯಬೇಕೆನಿಸಿತು .
  ಅವರ ಕಾರು ಅವರ ಅಂಗಡಿ ಎದುರು ನಿಂತಿತು.ರಾಜ್ ಕುಮಾರ ಅವರದ್ದು ಸ್ಪೆಷಲ್ ಬ್ರ್ಯಾಂಡ್ ಟೀ... ಡ್ರೈವರ್ ಹೋಗಿ ಆ ಬ್ರ್ಯಾಂಡ್ ಅನ್ನು ಹೇಳಿದ .!

  ಟೀ ಅಂಗಡಿಯವನಿಗೆ ರಾಜ್ ಕುಮಾರ್ ಬಂದಿರುವುದು ಅದರಿಂದಲೇ ತಿಳಿಯಿತು,ತಕ್ಷಣವೇ ಚೆನ್ನಾಗಿ ಟೀ ಮಾಡಿಕೊಂಡು ಕೊಟ್ಟು ಬಂದನು...
  ಕಾರೊಳಗೆ ಕುಳಿತು ರಾಜ್ ಕುಮಾರರು ಟೀ ಸವಿದರು ..
  ಡ್ರೈವರ್ ಟೀ ಅಂಗಡಿಯವನಿಗೆ ದುಡ್ಡು ಕೊಡಲು ಹೋದಾಗ ಅವನು ತೆಗೆದುಕೊಳ್ಳಲು ಒಪ್ಪಲೇ ಇಲ್ಲ ..

  ಏಕೆಂದರೆ ಆತ ಹೇಳಿದ ಮಾತಂತೆ ಅವರ ಅಂಗಡಿಗೆ ಬಂದು ಅವರು ಟೀ ಕುಡಿದರು,ಅದಕ್ಕೆ ದುಡ್ಡು ಯಾಕೆ ಕೊಡಬೇಕು ? ಒಗಟಾಯಿತು ಡ್ರೈವರ್ ಗೆ! ..

  ಅದರ ಹಿಂದಿನ ಕಥೆ ಏನೆಂದರೆ ಕೆಲವು ವರ್ಷದ ಹಿಂದೆ ಆತ ಗಾಡಿಯಲ್ಲಿ ಟೀ ಮಾರುತ್ತಿದ್ದ. ರಾಜ್ ಕುಮಾರ್ ಅವರೇ 10,000 ಕೊಟ್ಟು ಟೀ ಅಂಗಡಿ ಹಾಕು ಅಂದರಂತೆ.ಅದರಂತೆ ಈತ ಈಗ ಟೀ ಅಂಗಡಿಯ ಮಾಲೀಕ ..

  ಆಗಿನ 10,000 ರೂಪಾಯಿನ ಬೆಲೆ ಈಗ?
  ಬೆಂಗಳೂರಿನ ಹೃದಯಭಾಗದಲ್ಲಿ ಅಂಗಡಿ ಎಂದರೆ ಕೋಟ್ಯಾಂತರ ಜನರಿಗೆ ಕನಸು ಅದು..
  ರಾಜ್ ಅವರದು ಅತ್ಯಂತ ಉದಾತ್ತ ಗುಣ.ಅವರದ್ದು ಯಾವಾಗಲೂ ಕೊಡುವ ಕೈ.ಅವರು ಮಾಡುತ್ತಿದ್ದ ಸಹಾಯವನ್ನು ಯಾರಿಗೂ ಹೇಳುತ್ತಿರಲಿಲ್ಲ,ಅದೇ ಅವರ ದೊಡ್ಡ ಗುಣ...
   
  Sridhar Gowda, Bhavani and arasu_2016 like this.
 6. Arvi

  Arvi Moderator Staff Member

  Joined:
  Nov 7, 2012
  Messages:
  52,729
  Likes Received:
  16,985
  Trophy Points:
  113
  Location:
  Shivu aDDa
 7. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  972
  Likes Received:
  1,338
  Trophy Points:
  93
 8. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  972
  Likes Received:
  1,338
  Trophy Points:
  93
 9. Arvi

  Arvi Moderator Staff Member

  Joined:
  Nov 7, 2012
  Messages:
  52,729
  Likes Received:
  16,985
  Trophy Points:
  113
  Location:
  Shivu aDDa
 10. Arvi

  Arvi Moderator Staff Member

  Joined:
  Nov 7, 2012
  Messages:
  52,729
  Likes Received:
  16,985
  Trophy Points:
  113
  Location:
  Shivu aDDa
 11. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  972
  Likes Received:
  1,338
  Trophy Points:
  93
  ರಾಜ್ ರ 19 ಗಂಟೆಗಳ ಕಾರ್ಯಾಚರಣೆ
  = = = = = =

  ಬೆಳಗಿನ ಜಾವ ಮೂರು ಗಂಟೆಯಿಂದ ಇಪ್ಪತ್ತೆರಡೂವರೆ ತಾಸಿನವರೆಗೆ ರಾಜ್ ಜೀವನದಲ್ಲಿ ಉರುಳುವ 19 ತಾಸುಗಳು ಸುಧೀರ್ಘ. ಇವರಲ್ಲಿ ಪ್ರತಿಯೊಂದು ಕ್ಷಣವೂ ಅಮೂಲ್ಯ. ಒಂದೊಂದು ಕ್ಷಣವೂ ರಸಾನುಭವ. ಕಲೆಗೆ ಸಂಸ್ಕಾರ ಬೇಕು, ಕಲಾವಿದರನ್ನು ಯಾರೂ ಮಾಡುವುದಿಲ್ಲ. ಎಲ್ಲವೂ ಹುಟ್ಟಿನಿಂದಲೇ ಎಂದಾಗ ಸಭ್ಯತೆ, ಸೌಮ್ಯಮತೆ, ಇವೆರಡರ ಸಂಯೋಗದ ಜೊತೆಗೆ ಪಟ್ಟು, ಅಚ್ಚುಕಟ್ಟು, ಸ್ವಾವಲಂಬನೆ ಅವರ ಜೀವನದ ಅವಿಭಾಜ್ಯ ಅಂಗ. ಸರಳತೆ, ಸಹಿಷ್ಣುತೆ ಅವರ ಯಶಸ್ಸಿನ ಗುಟ್ಟು.

  ಜೀವನದ ಅನುಕ್ಷಣವೂ ಅಪರೂಪ. ಅಮೂಲ್ಯ. ಹಾಗೆಂದೇ ಜೀವನದ ಕ್ಷಣಗಳು ಕ್ಷೀಣಿಸದಂತೆ ಕಾಯಬೇಕು. ಹಾಗಾಗಿ ಪ್ರತಿ ಕ್ಷಣದ ಕಣಕಣದಲ್ಲೂ ಜೀವ ತುಂಬು, ಮಿಡಿತ, ತುಡಿದ ಇರಬೇಕು. ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಅವರು ಬಲುದೂರ.

  ರಾಜ್ ರವರ ಮನೆಯಲ್ಲಿ ಬೆಳಗಿನ ಜಾವ ಮೂರು ಗಂಟೆಗೆ ಬೆಳಗಾಗಿರುತ್ತದೆ. ಮಂಜು ಮಬ್ಬಾದ ಬೀಳುವ ಸಮಯ, ಚಳಿ, ಮಳೆ ಲೆಕ್ಕಿಸದೇ ಝಳ ಝಳ ತಣ್ಣೀರನ್ನು ಸ್ನಾನ ಮಾಡುತ್ತಾರೆ. ನಂತರ ವ್ಯಾಯಾಮ ಕೋಣೆಯಲ್ಲಿ ಯೋಗಾಭ್ಯಾಸದಲ್ಲಿ ತೊಡಗುತ್ತಾರೆ. ಮೂರರಿಂದ ಆರೂವರೆ ವರೆಗೆ ಮುವತ್ತುಮೂರು ಬಗೆ ಯೋಗದ ಭಂಗಿ. ಯೋಗಾಸನಕ್ಕೆ ಮೊದಲೇ ಒಂದು ಪುಟ್ಟ ಕೆಲಸ. ದೊಡ್ಡವರಾದವರು, ಶ್ರೀಮಂತರಾವರು ಎಂದೂ ಮಾಡದ ಕೆಲಸ. ತಮ್ಮ ನಿಕ್ಕರ್, ಬನಿಯನ್ ಗೆ ಸೋಪು ಹಚ್ಚಿ ಇಡುವುದು. ಯೋಗಾಭ್ಯಾಸದ ನಂತರ ಅದನ್ನು ತಾವೇ ಒಗೆದು ಸ್ವಚ್ಚಗೊಳಿಸಿ ಇಡುವುದು.

  ಮೈಯೆಲ್ಲ ಬೆವರಿನ ಹನಿ ಹರಿದಾಗ, ಮೈಗೆ ಚೈತನ್ಯ, ಚೈತನ್ಯಕ್ಕೆ ಪುಷ್ಟಿ. ಒಂದು ಲೋಟ ಹಾಲಿನ ಸೇವನೆ. ಮೈಯನ್ನೆಲ್ಲ ಟವೆಲ್ಲಿನಿಂದ ಒರೆಸಿ. ಟವಲ್ಲನ್ನು ತಣ್ಣೀರಿನಲ್ಲಿ ಹಿಂಡಿ ಮೈ ಒರೆಸಿದಾಗ, ಮನಸ್ಸಿಗೆ ಆಹ್ಲಾದಕರ, ದೇಹಕ್ಕೆ ಸಂಯಮದ ಕಡಿವಾಣ ಬಿದ್ದು, ಮನಸ್ಸಿಗೂ ಕೇಂದ್ರೀಕರಿಸುವ ಶಕ್ತಿ, ಶಕ್ತಿಗೆ ಭಕ್ತಿಯ ನಂಟು, ನಂತರ ದೇವರ ಕೋಣೆಗೆ ಹೋಗಿ, ಅರ್ಧ ತಾಸು ದೇವರಿಗೆ ಪೂಜೆ ಪುನಸ್ಕಾರ.

  ರಾಜ್ ದೇವರ ಕೋಣೆಯಿಂದ ಹೊರಬರುವಾಗಲೇ, ಆರಾಧ್ಯ ದೈವ ಗುರುಸಾರ್ವಭೌಮರಿಗೆ ನಮನ. ನಂತರ ಶ್ವೇತ ವಸ್ತ್ರಧಾರಿ. ರಾಜ್ ಹೆಚ್ಚಾಗಿ ಬಿಳಿ ರೇಷ್ಮೆ ಪಂಚೆ ಇಲ್ಲವೆ ನೂಲಿನ ಪಂಚೆ. ಶರ್ಟ್ ಧರಿಸಿ, ಉಪಹಾರಕ್ಕೆ ಸಿದ್ದ. ಉಪಹಾರದ ನಂತರ ನೇರ ಅವರದೇ ಬೆಂಜ್ ಕಾರಿನಲ್ಲಿ ಸ್ಟುಡಿಯೋ ತಲುಪುವಾಗ ಸರಿಯಾಗಿ 7-00 ಗಂಟೆ. ಸ್ಟುಡಿಯೋಗೆ ಕಾಲಿಟ್ಟ ಘಳಿಗೆ ಪ್ರಸಾಧನ ಕೋಣೆಗೆ ನಮನ. ನಂತರ ಕುರ್ಚಿಯಲ್ಲಿ ಕುಳಿತು ತಾವೇ ಸ್ವತ: ಮೇಕಪ್ ಧರಿಸುತ್ತಾರೆ. ನಂತರ ದೊರೆಸ್ವಾಮಿ (ಮೇಕಪ್ ಪಟು) ಬಂದು ಮೇಕಪ್ ಮಾಡುತ್ತಾರೆ. ಮೇಕಪ್ ಧರಿಸುವಾಗಲೇ ಆ ದಿನದ ಚಿತ್ರೀಕರಣ, ಸನ್ನಿವೇಶ, ಸಂಭಾಷಣೆ ಬಗ್ಗೆ ನಿರ್ದೇಶಕ ಇಲ್ಲವೇ ಸಹ ನಿರ್ದೇಶಕರಿಂದ ವಿವರಣೆ, ಚರ್ಚೆ. ನಂತರ ಶಾಟ್ ಬರುವವರೆಗೂ ವಿಶ್ರಾಂತಿ. ಸಹನಿರ್ದೇಶಕರು ಬಂದು ತಿಳಿಸಿದಾಗ, ಡ್ರೆಸ್ ಮಾಡಿಕೊಂಡು ಸೆಟ್ಟಿಗೆ ಹೋಗಿ, ಕ್ಯಾಮೆರಾ ಎದುರಿಸಲು ಸಿದ್ಧರಾಗುತ್ತಾರೆ. ಅಂದಿನ ದೃಶ್ಯ ಯಾವುದು ಎಂದು ಮನನ ಮಾಡಿಕೊಂಡು ಸಂಭಾಷಣೆ ಮೆಲುಕು ಹಾಕುತ್ತ ನಂತರ ಅಭಿನಯ. ಚಿತ್ರೀಕರಣ ತಡವಾದರೆ ಅವರು ಸಮಯ ವ್ಯರ್ಥ ಮಾಡದೇ ಚಿ. ಉದಯಶಂಕರ್ ರವರೊಂದಿಗೆ ತಮ್ಮ ಇತರೆ ಚಿತ್ರಗಳ ಬಗ್ಗೆ ಚರ್ಚಿಸಲು ಕೂಡುತ್ತಾರೆ. ಈ ಎಲ್ಲವನ್ನೂ ರಾತ್ರಿ 10-00 ಗಂಟೆಯವರೆಗೆ ನಡೆಯುತ್ತದೆ.
   
  Sridhar Gowda likes this.
 12. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  972
  Likes Received:
  1,338
  Trophy Points:
  93
 13. Arvi

  Arvi Moderator Staff Member

  Joined:
  Nov 7, 2012
  Messages:
  52,729
  Likes Received:
  16,985
  Trophy Points:
  113
  Location:
  Shivu aDDa
 14. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  972
  Likes Received:
  1,338
  Trophy Points:
  93
 15. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  972
  Likes Received:
  1,338
  Trophy Points:
  93
 16. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  972
  Likes Received:
  1,338
  Trophy Points:
  93
 17. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  972
  Likes Received:
  1,338
  Trophy Points:
  93
 18. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  972
  Likes Received:
  1,338
  Trophy Points:
  93

Share This Page