ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಭಾಷಣ ಆರà

Chanda Marutha

Administrator
Staff member
ಬೆಂಗಳೂರು: ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್‌ ಅವರು ಸೋಮವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸುವ ಮೂಲಕ ಗಮನಸೆಳೆದರು.

‘ಅಧ್ಯಕ್ಷರೆ ಹಾಗೂ ಸಹೋದರ-ಸಹೋದರಿಯರೆ ನಿಮಗೆಲ್ಲ ಮುಂಜಾವಿನ ಶುಭಾಶಯಗಳು’ ಎಂದು ಆರಂಭದಲ್ಲಿ ಕನ್ನಡದಲ್ಲೇ ಹೇಳಿ ನಂತರ ಅದನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಇಂಗ್ಲಿಷ್‌ ಭಾಷೆಯಲ್ಲಿಯೇ ಭಾಷಣ ಮಾಡಿದರು.


ಸ್ಥಾಯಿ ಸಮಿತಿ ಸದಸ್ಯರನ್ನು ಒಳಗೊಂಡ ಭಾರತೀಯ ನಿಯೋಗದಲ್ಲಿ ತೆರಳಿದ್ದ ಅನಂತ್‌, ‘ರಿಪೋರ್ಟ್‌ ಆಫ್ ದಿ ಇಂಟರ್‌ನ್ಯಾಷನಲ್‌ ಕ್ರಿಮಿನಲ್‌ ಟ್ರಿಬ್ಯುನಲ್‌ ಫಾರ್‌ ದಿ ಪ್ರಾಸಿಕ್ಯೂಷನ್‌ ಆಫ್ ಪರ್ಸನ್ಸ್‌ ರೆಸ್ಪಾನ್ಸಿಬಲ್‌ ಫಾರ್‌ ಜಿನೋಸೈಡ್‌ ಆ್ಯಂಡ್‌ ಅದರ್‌ ಸೀರಿಯಸ್‌ ಕ್ರೈಮ್ಸ್‌’ ( `ನರಮೇಧ ಮತ್ತು ಇನ್ನಿತರ ಹೇಯ ಅಪರಾಧ ಕುರಿತ ಅಂತರರಾಷ್ಟ್ರೀಯ ನ್ಯಾಯಮಂಡಳಿಯ ವರದಿ`)ಎಂಬ ವಿಷಯ ಕುರಿತು ಮಾತನಾಡಿದರು.
 
Top