ಕನ್ನಡದ ಮೊದಲ ಶಾಸನ.

ಕನ್ನಡ ಭಾಷಿಕರಿಗಾಗಿ ಅದೊಂದು 'ಧರ್ಮ' ಎಂದು ತಿಳಿದು ಕನ್ನಡನಾಡನ್ನು ಕಟ್ಟಿದ ಮೊದಲ ರಾಜ ಮಯೂರನು ಬೆಳೆದ, ಕನ್ನಡದ ಮೊಟ್ಟಮೊದಲ ವಿದ್ಯಾಕೇಂದ್ರವಾಗಿದ್ದ ಶ್ರೀ ಪ್ರಣವೇಶ್ವರನ ಅಂಗಳದಲ್ಲಿ ದೊರೆತಿರುವ #ಸಿಂಹಕಟಾಂಜನ ಶಾಸನವೇ ಇದೀಗ ಕನ್ನಡದ ಮೊಟ್ಟಮೊದಲ ಶಾಸನ.
ಹೌದು ಈ ಶಾಸನವು ಹಲ್ಮಿಡಿ ಶಾಸನಕ್ಕಿಂತಲೂ ಸುಮಾರು ೭೦ ವರ್ಷ ಹಿಂದಿನದು ಎಂದು ಕೇಂದ್ರ ಪುರಾತತ್ವ ಇಲಾಖೆ ಖಚಿತವಾಗಿ ಹೇಳಿದೆ.
ಇದಿರೋದು ಶಿವಮೊಗ್ಗ ಜಿಲ್ಲೆಯ, ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಹತ್ತಿರ ಇರುವ ತಾಳಗುಂದ ಗ್ರಾಮದಲ್ಲಿ.
ಇನ್ನೂ ಅತೀ ಹೆಚ್ಚು ಜನರಿಗೆ ಕನ್ನಡದ ಮೊದಲ ಶಾಸನದ ಬಗ್ಗೆ ಅರಿವಿಲ್ಲ. ಬನ್ನಿ ಕನ್ನಡನಾಡಿನ ಪ್ರಾಚೀನತೆಯ ಬಗ್ಗೆ ಅರಿವು ಮೂಡಿಸಲು ಧ್ವನಿಗೂಡಿಸಿ
ಮತ್ತು ಈ ವಿಚಾರವನ್ನು ನಿಮ್ಮ ಆತ್ಮೀಯರೊಡನೆ ಹಂಚಿಕೊಳ್ಳಿ.
(ಈ ಶಾಸನದ ಕುರಿತು ಇನ್ನಷ್ಟು ಆಸಕ್ತಿಯಿದ್ದಲ್ಲಿ ನಿಮ್ಮ ಮಿಂಚಂಚೆಯ ವಿಳಾಸವನ್ನು ಇಲ್ಲಿ ಕಳುಹಿಸಿ, ಇದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಕಳುಹಿಸಲಾಗುವುದು)


Sent from my XT1068 using Tapatalk
 
ಇದೇ ತಾಳಗುಂದದ ದೇವಾಲಯದ ಮುಂದೆ ಇರುವ ಈ ಶಾಸನದ ಆಧಾರದಿಂದಲೇ ಅಣ್ಣಾವ್ರ ಮಯೂರ ಚಿತ್ರ ಮೂಡಿಬಂದಿರೋದು.


Sent from my XT1068 using Tapatalk
 
Top