ಈ ಚಿತ್ರದಲ್ಲಿ ಒಂದು ದೊಡ್ಡ ಕುಟುಂಬ ಇದೆ. ಅದರಲ್ಲಿ ಹದಿನೈದು ಇಪ್ಪತ್ತು ಮಂದಿ ಇರುತ್ತಾರೆ. ಅನಂತ್ ನಾಗ್ ಕುಟುಂಬದಲ್ಲಿ ಹಿರಿಯ. ಅವರಿಗೆ ಮೂರು ಮಂದಿ ಗಂಡು ಮಕ್ಕಳು. ಅವರ ಸ್ನೇಹಿತರ ಮಕ್ಕಳನ್ನೇ ಮೂರು ಜನಕ್ಕೂ ವಿವಾಹ ಮಾಡಿ ಸೊಸೆಯಂದಿರನ್ನಾಗಿಸಿರುತ್ತಾರೆ. ಎಲ್ಲರಿಗೂ ಮೊಮ್ಮಕ್ಕಳು ಇರುತ್ತಾರೆ. ಅವರೊಳಗೆ ನಾಯಕಿ ಯಾರು? ಅಲ್ಲಿಗೆ ಕಾಲಿಡುವ ನಾಯಕನಿಗೆ ಆ ತಾತನ ಜೊತೆಗೆ ಇರುವ ಸಂಬಂಧ ಏನು? ನಾಯಕನ ವರ್ತನೆಗಳು ತಾತನನ್ನು ಯಾಕೆ ಇಂಪ್ರೆಸ್ ಮಾಡುತ್ತವೆ? ನಾಯಕನಿಗೂ ಅನಂತನಾಗ್ ಅವರ ಪಾತ್ರಕ್ಕೂ ಇರುವ ಬಾಂಡಿಂಗ್ ತುಂಬ ಹತ್ತಿರವಾಗಿರುವಂಥದ್ದು. ಆ ಎರಡು ಪಾತ್ರಗಳ ನಡುವಿನ ಭಾವನಾತ್ಮಕ ಸಂಬಂಧ ತುಂಬ ಚೆನ್ನಾಗಿದೆ. ಹಾಗಂತ ಎಲ್ಲಿಯೂ ಮೆಲೋ ಡ್ರಾಮಾ ಇಲ್ಲ. ಆ ಕುಟುಂಬದೊಳಗೆ ನಾಯಕನ ಪಾತ್ರ ಹೇಗೆ ಎಂಟ್ರಿಯಾಗುತ್ತದೆ ಮತ್ತು ಹೇಗೆ ಮುಂದುವರಿಯುತ್ತದೆ ಎನ್ನುವುದು ಚಿತ್ರದ ಕುತೂಹಲದ ಅಂಶ.