ಮೂರನೇ ಚಿತ್ರಕ್ಕೆ ಮುನ್ನುಡಿ ಬರೆದ ಹರ್ಷ-ಶಿವರಾಜ್ ಕುಮಾರ್
ನೃತ್ಯ ನಿರ್ದೇಶಕ ಹರ್ಷ
ಮತ್ತು ನಟ ಶಿವರಾಜ್ ಕುಮಾರ್
ಕಾಂಬಿನೇಷನ್ನ `ವಜ್ರಕಾಯ’ ಚಿತ್ರ
ಕುತೂಹಲವನ್ನು ಹುಟ್ಟು ಹಾಕಿದ್ದು, ತೆರೆಗೆ
ಬರಲು ಸಿದ್ದವಾಗಿದೆ. ಇಂತಹ
ಸಂದರ್ಭದಲ್ಲಿ ಈ ಇಬ್ಬರ ಜುಗಲ್ಬಂದಿಯ
ಮತ್ತೊಂದು ಚಿತ್ರ ಸೆಟ್ಟೇರಲಿದೆ.
`ಭಜರಂಗಿ’ ಚಿತ್ರವನ್ನು ನೀಡಿದ್ದ ಹರ್ಷ
ಮತ್ತು ಶಿವರಾಜ್ ಕುಮಾರ್ ಈಗ
`ವಜ್ರಕಾಯ’ನಾಗಿ ಅಬ್ಬರಿಸೋಕೆ ರೆಡಿ
ಇದ್ದು, ಮತ್ತೊಂದು ಚಿತ್ರದ ಮೂಲಕ
ಹ್ಯಾಟ್ರಿಕ್ ಬಾರಿಸೋ ನಿರೀಕ್ಷೆ
ಹೊತ್ತಿದ್ದಾರೆ. ಮೂರನೇ ಚಿತ್ರವೂ ಸಹ
ಹನುಮಂತನ ಹೆಸರಿನಲ್ಲೇ ಮಾಡಲಿರೋದು
ವಿಶೇಷ. ಈ ಚಿತ್ರಕ್ಕೆ `ಆಂಜಿ’ ಎಂದು
ನಾಮಕರಣ ಮಾಡಲಿದ್ದಾರೆ.
ಭಜರಂಗಿ ಚಿತ್ರದ ಮೂಲಕ ಮೊದಲ ಸಕ್ಸಸ್
ಕಂಡ ನಂತರ ಕೈ ಹಾಕಿರೋ
`ವಜ್ರಕಾಯ’ನ ಹಣೆ ಬರಹವನ್ನು
ಪ್ರೇಕ್ಷಕ ಬರೆಯುವ ಮುನ್ನವೇ ಮೂರನೇ
ಚಿತ್ರಕ್ಕೆ ಮುನ್ನುಡಿ ಬರೆದಿರುವುದು
ಗಮನಾರ್ಹ. `ಆಂಜಿ’ ಚಿತ್ರದ ಕಥೆಗಾಗಿ
ಹರ್ಷ ತಲೆಕೆಡಿಸಿಕೊಂಡಿದ್ದರೆ, ಶಿವರಾಜ್
ಕುಮಾರ್ ಶಿವಲಿಂಗ, ಸಂತೆಯಲ್ಲಿ ನಿಂತ
ಕಬೀರ, ಬಾದ್ಶಾ, ಮತ್ತು ಕಿಲ್ಲಿಂಗ್
ವೀರಪ್ಪನ್ ಚಿತ್ರಗಳಲ್ಲಿ
ಬ್ಯುಸಿಯಾಗಿದ್ದಾರೆ.