Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Jeevaa

aDDa Junior
ವಿಶ್ವದ ಯಾವೊಬ್ಬ ನಟನೂ ತಮ್ಮ ಜೀವವೇ ಕೊಡುವ ಮಟ್ಟಿಗೆ ಇಷ್ಟೊಂದು (ಲೆಕ್ಕವಿಲ್ಲದಷ್ಟು )ಜನರನ್ನು ಸಂಪಾದಿಸಲಾರ
ದೇವಮಾನವ , ಸರ್ವಶ್ರೇಷ್ಠ, ದೇವತಾ ಮನುಷ್ಯ , ಬಂಗಾರದ ಮನುಷ್ಯ , ವಿಶ್ವ ರತ್ನ ನಮ್ಮೆಲ್ಲರ (ಕರ್ನಾಟಕದ) ಆರಾಧ್ಯ ದೈವ ಬರೀ ಅಣ್ಣಾವ್ರು ಇವ್ರ ರೇಂಜ್ ಗೆ ಹಿಂದೆ ಯಾರು ಹುಟ್ಟಿಲ್ಲ ಮುಂದೆ ಹುಟ್ಟಲ್ಲ :kisslove:love
ಅಭಿಮಾನಿಗಳ ಕೈಯಲ್ಲಿ ಅಂತ್ಯಕ್ರಿಯೆ ಮಾಡಿಸಿಕೊಂಡ ಎಕೈಕ ನಟ

Sent from my Redmi 4 using Tapatalk
 

Vishwas Mysuru

aDDa Junior
ಅಣ್ಣಾವ್ರು ನಕ್ಕಾಗ ಅವರ ಜೊತೆ ನಕ್ಕು, ಅಣ್ಣಾವ್ರು ಅತ್ತಾಗ ಅವರ ಜೊತೆ ಅತ್ತು, ಅಣ್ಣಾವ್ರಿಗೆ ಅಭಿಮಾನಿಗಳೇ ಎಲ್ಲಾ, ಅಭಿಮಾನಿಗಳಿಗೆ ಅಣ್ಣಾವ್ರೇ ಎಲ್ಲಾ ಎಂದು ಅವರ ದೇಹವನ್ನು ಸುಡಲು ಬಿಡದೆ ಎಲ್ಲ ಕಾರ್ಯಗಳನ್ನು ಅಭಿಮಾನಿಗಳೆ ಮಾಡಿ ಮಣ್ಣಿನ ಮಗನನ್ನು ಮಣ್ಣಿಗೆ ಸೇರಿಸಿ ಹೂವಿಟ್ಟ ಕ್ಷಣ :love
#ಅಣ್ಣಾವ್ರು_ಮತ್ತು_ಅಭಿಮಾನಿಗಳು :kisslove
 

Vishwas Mysuru

aDDa Junior
ಪ್ರೇಕ್ಷಕರ ಜೊತೆಗೆ ರಾಜ್ ಆನಂದ
= = = = = = =

ಪ್ರೇಕ್ಷಕರ ಮಧ್ಯೆ ಡಾ: ರಾಜ್ ಕುಮಾರ್ ಅವರು ಕುಳಿತು ಚಿತ್ರವೊಂದನ್ನು ವೀಕ್ಷಿಸಿದ್ದು ಬಹು ಅಪರೂಪ. ರಾಜ್ ರವರು ಅಪರ್ಣಾ ಥಿಯೇಟರ್ ನಲ್ಲಿ ಬಾಲ್ಕನಿ ಪ್ರೇಕ್ಷಕರೊಂದಿಗೆ ಕುಳಿತು ಚಿತ್ರವೊಂದನ್ನು ವೀಕ್ಷಿಸಿದರು. ಆ ಚಿತ್ರ ರಾಜ್ ಪುತ್ರ ಶಿವರಾಜ್ ಕುಮಾರ್ ಅಭಿನಯಿಸಿರುವ ಆನಂದ್. ಈ ಹಿಂದೆ ಇದೇ ಚಿತ್ರವನ್ನು ಖಾಸಗಿಯಾಗಿ ವೀಕ್ಷಿಸಿದ್ದರೂ, ಪ್ರೇಕ್ಷಕರ ಪ್ರತಿಕ್ರಿಯೆ ತಿಳಿಯುವ ಕುತೂಹಲದಿಂದ ಅಂದಿನ ಬೆಳಗಿನ ಪ್ರದರ್ಶನಕ್ಕೆ ರಾಜ್ ತಮ್ಮ ಪತ್ನಿ ಸಮೇತರಾಗಿ ಹೋಗಿದ್ದರು.

ಗುರಿ ಚಿತ್ರದ ಚಿತ್ರೀಕರಣದ ಮಧ್ಯೆ ಬಿಡುವು ಮಾಡಿಕೊಂಡು ಹೋಗಿದ್ದರಿಂದ ಆ ಚಿತ್ರದ ಕಾಸ್ಟ್ಯೂಮ್ ನಲ್ಲಿದ್ದರು. ಚಿತ್ರ ಆರಂಭವಾದ ಮೇಲೆ ಸೀಟು ಸೇರಿದ ರಾಜ್ ಚಿತ್ರ ಬಿಡುವ ಮುಂಚೆಯೇ ಜಾಗವೇ ಖಾಲಿ ಮಾಡಿದ್ದರು. ಇದರಿಂದ ಚಿತ್ರ ರಸಿಕರ ಕಾಟದಿಂದ ಪಾರಾದರು. ಆದರೂ ವಿರಾಮದ ವೇಳೆ ಗಲಾಟೆಯಾಗದಿರಲಿಲ್ಲ. ಈ ಗಲಾಟೆಯನ್ನು ಸಹಿಸಿಕೊಂಡ ರಾಜ್ ರವರು ತಮ್ಮ ಪುತ್ರ ತೆರೆಯ ಮೇಲೆ ಮಿಂಚುವಾಗಲೆಲ್ಲ ಪ್ರೇಕ್ಷಕರ ಸಿಳ್ಳೇ, ಚಪ್ಪಾಳೆ, ಪ್ರೋತ್ಸಾಹದ ನುಡಿ ಕೇಳಿ ಆನಂದ ತುಂದಿಲರಾದರು.
 
Top