Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Vishwas Mysuru

aDDa Junior
ರಾಜಕುಮಾರ್ ಅವರ ಚಿತ್ರವೊಂದು ನವೆಂಬರ್ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಿತ್ತು. ಬೆಂಗಳೂರಲ್ಲಿ ಸಹಜವಾಗಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಇತ್ತು. "ರಾಜ್ ಕುಮಾರ್ ಅವರು ಸಿಕ್ಕಿದರೆ ಸಾಕು ಸಮಾರಂಭಕ್ಕೆ ಕರೆಯೋಣ" ಎಂದು ಕನ್ನಡಾಭಿಮಾನಿಗಳ ಕಾತರ.
ಅಣ್ಣಾವ್ರು ಕೂಡ ಸಮಾರಂಭಕ್ಕೆ ಒಪ್ಪಿಕೊಳ್ಳತೊಡಗಿದರೆ ಚಿತ್ರೀಕರಣಕ್ಕೆ ತೊಂದರೆಯಾಗಬಹುದೆಂದು ನಿರ್ಮಾಪಕರಿಗೆ ಆತಂಕ.ಬೆಂಗಳೂರಿನಲ್ಲಿ ರಾಜ್ ಕುಮಾರ್ ಅವರು ಇಳಿದುಕೊಳ್ಳುತ್ತಿದ್ದ "ಹೈಲ್ಯಾಂಡ್" ಹೋಟೆಲ್ ತಾರಾ ಹೋಟೆಲ್ ಅಲ್ಲವಾದ ಕಾರಣ, (ಅವರು ಮೊದಲಿನಿಂದಲೇ ಆ ಮಧ್ಯಮ ದರ್ಜೆಯ ಹೋಟೆಲಲ್ಲಿ ಇಳಿದುಕೊಳ್ಳುತ್ತಾರೆ ಎಂದು ಎಲ್ಲರಿಗೂ ಗೊತ್ತಿದ್ದರಿಂದ) ಕಾರ್ಯಕ್ರಮಗಳಿಗೆ ಕರೆಯಲು ಜನರು ಮುತ್ತಿಕೊಳ್ಳುತ್ತಾರೆ ಎಂದು ಯೋಚಿಸಿದ ನಿರ್ಮಾಪಕರು ಪಂಚತಾರಾ ಅಶೋಕ ಹೋಟೆಲಲ್ಲಿ ರೂಮ್ ಮಾಡಿ ರಾಜ್ ಕುಮಾರ ಅವರನ್ನು ಅಲ್ಲಿಗೆ ಕರೆದೊಯ್ದರು!
ರೂಮಿಗೇ ಬಿಟ್ಟು ವಾಪಸ್ ಬಂದರೂ ಮಾರನೆಯ ದಿನ ಅಶೋಕ ಹೋಟೆಲ್ ಅಶ್ವಯ೯ ಮತ್ತು ಆತಂಕ ಒಟ್ಟಾಗಿ ಕಾದಿದ್ದವು! ರಾಜ್ ಕುಮಾರ್ ಅವರು ಅಶೋಕ ಹೋಟೆಲ್ ನಲ್ಲಿ ಇರಲಿಲ್ಲ! ರಾತ್ರಿಯೇ ರೂಮ್ ಖಾಲಿ ಮಾಡಿದ್ದಾರೆ ಎಂದು ಹೋಟೆಲ್ ನವರು ಹೇಳಿದರು. ನಿರ್ಮಾಪಕರಿಗೆ ಪೇಚಾಟ. ತಮ್ಮ ಕಡೆಯಿಂದ ಎನಾದ್ರೂ ಲೋಪವಾಗಿರಬಹುದು ಎಂದು ಚಿಂತಿಸುತ್ತಾ ಚಿತ್ರತಂಡದವರು ಇಳಿದುಕೊಂಡಿದ್ದ ಹೈಲ್ಯಾಂಡ್ ಹೋಟೆಲಿಗೆ ಬಂದಾಗ ಅಲ್ಲಿ ಮತ್ತೊಂದು ಅಚ್ಚರಿ ಮತ್ತು ಆನಂದ. ರಾಜ್ ಕುಮಾರ್ ಅವರು ಅಲ್ಲೇ ತಮ್ಮ ಮೊದಲಿನ ರೂಮಿನಲ್ಲಿ ಇದ್ದರು. ‌ಮಾತ್ರವಲ್ಲ ಚಿತ್ರೀಕರಣಕ್ಕೆ ಸಿದ್ಧರಾಗಿ ಕೂತಿದ್ದರು. ಏನಾಯಿತೆಂದು ವಿಚಾರಿಸಿದಾಗ ಅವರು ಹೇಳಿದ್ದು ಇಷ್ಟು" ನೀವೆಲ್ಲಾ ನನ್ನನ್ನು ಅಶೋಕ ಹೋಟೆಲ್ ನಲ್ಲಿ ಬಿಟ್ಟು ಹೋದ ಮೇಲೆ ಊಟ ಕೇಳಿದೆ. ಊಟವಾಯಿತು ಸೈನ್ ಮಾಡಲು ಬಿಲ್ ತಂದರು.ಸೈನ್ ಮಾಡುತ್ತಾ ಬಿಲ್ ನೋಡಿದೆ ಅಬ್ಬಾ" ಒಂದು ಊಟ ಅದೆಷ್ಟು ದುಬಾರಿ. ನಾನು ನಿರ್ಮಾಪಕರಿಗೆ ಇಷ್ಟು ಹೊರೆಯಾಗಬಾರದು ಎನಿಸಿತು. ನನ್ನ ಹಳೇ ಹೋಟೆಲ್ ರೂಮೇ ಸರಿ ಎಂದು ಕೂಡಲೇ ಆ ರೂಮ್ ಖಾಲಿ ಮಾಡಿ ಇಲ್ಲಿಗೆ ಬಂದೇ.." ಎಂದರು!
ರಾಜ್ ಕುಮಾರ ಅವರ ಈ ವಿವರಣೆ ಕೇಳಿ ನಿರ್ಮಾಪಕರು ಬೆರಗಾದರು.

ಬಡತನ ಸಹಿಸೋದು ಕಷ್ಟ ಎಂದವರನ್ನು ನೀವು ನೋಡಿರಬಹುದು ಸಿರಿತನ ಸಹಿಸೋದು ಕಷ್ಟ ಅಂದವರು ಬಹುಶಃ ಸಿನಿಮಾ ನಟರಲ್ಲಿ ನಮ್ಮ ಅಣ್ಣಾವ್ರು ಮಾತ್ರ ಎನ್ನಬಹುದು.

#(ವಾಟ್ಸ್ಯಾಪ್_ಮಾಹಿತಿ)
#ರಾಜ್_ವಿಚಾರ
 

Vishwas Mysuru

aDDa Junior
ಅಣ್ಣಾವ್ರ ಮೊದಲ ಭೇಟಿಯ ಪುಳಕ
= = = = = =

1) ಬದುಕಿದರೆ ಅಷ್ಟು ನಿರ್ಮಲವಾಗಿ ಜೀವಿಸಬೇಕು – ಎಸ್. ನಾರಾಯಣ್

ನಾನು ಡಾ: ರಾಜ್ ಕುಮಾರ್ ರವರನ್ನು ಮೊದಲು ನೋಡಿದ್ದು 1986 ರಲ್ಲಿ. ನಾನು ಆಗಷ್ಟೇ ಚಿತ್ರರಂಗಕ್ಕೆ ಬಂದಿದ್ದೆ. ಗುರುಗಳಾದ ಭಾರ್ಗವ ಅವರು ಕೃಷ್ಣಾ ನೀ ಬೇಗನೇ ಬಾರೋ ಚಿತ್ರ ಮಾಡುತ್ತಿದ್ದರು. ಆ ಚಿತ್ರಕ್ಕೆ ನಾನು ಸಹಾಯಕ ನಿರ್ದೇಶಕ ಆಗಿದ್ದೆ. ಚಿತ್ರದ ಚಿತ್ರೀಕರಣ ಬೆಂಗಳೂರಿನ ಚಾಮುಂದೇಶ್ವರಿ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಆಗ ಅದೇ ಸ್ಟುಡಿಯೋದಲ್ಲಿ ನಾಲ್ಕು ಸಿನಿಮಾಗಳಿಗೆ ಶೂಟಿಂಗ್ ನಡೆಯುತ್ತಿತ್ತು. ಆ ಚಿತ್ರಗಳಲ್ಲಿ ಡಾ: ರಾಜ್ ಕುಮಾರ್ ಅಭಿನಯದ ಗುರಿ ಸಿನಿಮಾ ಕೂಡ ಒಂದು. ಆಗ ಗುರಿ ಚಿತ್ರದ ವಸಂತಕಾಲ ಬಂದಾಗ ಹಾಡಿನ ಚಿತ್ರೀಕರಣ ಇತ್ತು. ಚಿತ್ರೀಕರಣದ ನಡುವೆ ನಮ್ಮ ಫ್ಲೋರಿಗೆ ಬಂದರು. ಆಗಲೇ ನನಗೆ ಡಾ: ರಾಜ್ ಕುಮಾರ್ ಅವರ ಮುಖ ದರ್ಶನವಾಗಿದ್ದು, ಬಾಲ್ಯದಿಂದಲೂ ಅವರ ಸಿನಿಮಾಗಳನ್ನು ನೋಡಿಕೊಂಡು ಬಂದವನು. ಒಮ್ಮೆಯಾದರೂ ಅವರನ್ನು ಹತ್ತಿರೆದಿಂದ ನೋಡುವ ಭಾಗ್ಯಕ್ಕಾಗಿ ಕಾಯುತ್ತಿದ್ದೆ. ಆದರೆ ಅಷ್ಟು ಹತ್ತಿರದಿಂದ ನೋಡುತ್ತೇನೆಂಬ ಕನಸು ಕೂಡ ನಾನು ಕಂಡಿರಲಿಲ್ಲ. ತೀರಾ ಹತ್ತಿರ ನಿಂತು ನೋಡಿ ಧನ್ಯನಾದೆ. ಎಲ್ಲರನ್ನು ನಗು ನಗುತ್ತ ಮಾತನಾಡಿಸುವ ಅವರ ಸೌಜನ್ಯ, ಬದುಕಿದರೆ ಇಷ್ಟು ನಿರ್ಮಲವಾಗಿ ಜೀವಿಸಬೇಕು ಎನ್ನುವಷ್ಟು ಮೊದಲ ನೋಟದಲ್ಲೇ ಪ್ರಭಾವಿಸಿದ ವ್ಯಕ್ತಿ ಅವರು.

2) ರಂಗೋತ್ಸವದಲ್ಲಿ ಜೀವನ ಸಾರ್ಥಕವಾದಿ ಕ್ಷಣ – ಟಿ.ಎಸ್. ನಾಗಾಭರಣ.

ಡಾ: ರಾಜ್ ಕುಮಾರ್ ರವನ್ನು ನಾನು ನೋಡಿದ್ದು ತುಂಬಾ ವಿಶೇಷ ಸಂದರ್ಭದಲ್ಲಿ. 1979 ಆಗ ನಾನು ಬಿ.ವಿ. ಕಾರಂತ ರ ಜೊತೆ ಕೆಲಸ ಮಾಡುತ್ತಿದ್ದೆ. ಅವರು ಬಯಲು ರಂಗೋತ್ಸವ ಆಯೋಜಿಸಿದ್ದರು. ದೊಡ್ಡ ಮಟ್ಟದ ಸಾಂಸ್ಕೃತಿಕ ರಂಗ ಹಬ್ಬ ಅದು. ಪ್ರತಿ ದಿನ ನಾಟಕ ಪ್ರದರ್ಶನ ಇತ್ತು. ಅಂದು ಮೂರು ನಾಟಕಗಳ ಪ್ರದರ್ಶನ. ಆ ಪೈಕಿ ಒಂದು ನಾಟಕಕ್ಕೆ ನಾನೇ ಸ್ಟೇಜ್ ಮ್ಯಾನೇಜರ್ ಆಗಿದ್ದೆ. ಜೊತೆಗೆ ಆ ನಾಟಕದಲ್ಲಿ ನಾನು ಪಾತ್ರ ಕೂಡ ಮಾಡಿದ್ದೆ. ಅದರ ಹೆಸರು ಶಿವಕುಮಾರಸ್ವಾಮಿ ಎಂಬುದು. ಈ ಬಯಲು ರಂಗೋತ್ಸವ ನೋಡಲು ದೊಡ್ಡ ದೊಡ್ಡ ವ್ಯಕ್ತಿಗಳು ಬರುತ್ತಿದ್ದರು. ಹಾಗೆ ಒಂದು ದಿನ ಅದರಲ್ಲೂ ನಾನು ಪಾತ್ರ ಮಾಡುತ್ತಿದ್ದ ಶಿವಕುಮಾರಸ್ವಾಮಿ ನಾಟಕ ನೋಡಲು ದಿಢೀರ್ ಅಂತ ಆಗಮಿಸಿದರು ಡಾ: ರಾಜ್ ಕುಮಾರ್.ಒಂದು ಕಡೆ ನನ್ನ ನೆಚ್ಚಿನ ಗುರುಗಳಾದ ಬಿ.ವಿ. ಕಾರಂತರು, ನಾನು ಬಣ್ಣ ಹಚ್ಚಿಕೊಂಡ ಸಂದರ್ಭ ಇವೆಲ್ಲ ಒಟ್ಟಿಗೆ ಇದ್ದ ಗಳಿಗೆಯಲ್ಲಿ ಡಾ: ರಾಜ್ ಕುಮಾರ್ ಅವರನ್ನು ಹತ್ತಿರದಿಂದ ಕಂಡೆ. ಅವರು ಕಾರಂತರ ಜೊತೆ ಮಾತನಾಡುತ್ತಿದ್ದಾಗ ನಾವು ಬೆರಗು ನೋಟದಿಂದ ನೋಡುತ್ತಾ ನಿಂತು ಕೊಂಡಿದ್ದೆವು. ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣ ಅದು.

= = = = = =

3) ನನಗೆ ಅವರು ಸಿಕ್ಕಿದ್ದು ಒಡಹುಟ್ಟಿದವರು ಚಿತ್ರದಲ್ಲಿ – ರಾಜ್ ಬಿ. ಶೆಟ್ಟಿ

ನಾನು ರೀಯಲ್ಲಾಗಿ ಡಾ: ರಾಜ್ ಕುಮಾರ್ ಅವರನ್ನು ನೋಡಲಿಕ್ಕೆ ಆಗಲಿಲ್ಲ. ಆದರೆ ರಾಜ್ ಅವರ ಮುಖವನ್ನು ಮೊದಲ ಬಾರಿಗೆ ತೆರೆಯ ಮೇಲೆ ನೋಡಿದ್ದು. ಅಂದ್ರೆ ಒಡಹುಟ್ಟಿದವರು ಚಿತ್ರದಲ್ಲಿ ನನಗೆ ಆ ಸಿನಿಮಾ ನೆನಪಿನಲ್ಲಿರುವುದಕ್ಕೆ ಕಾರಣ ಆ ಚಿತ್ರದಲ್ಲಿ ಬರುವ ಎತ್ತಿನ ಗಾಡಿ ಸ್ಪರ್ಧೆ. ಒಂದು ಕಡೆ ಚಿತ್ರದ ವಿಲನ್ ಗಳು, ಮತ್ತೊಂದು ಕಡೆ ಡಾ: ರಾಜ್ ಕುಮಾರ್ ತಂಡ. ಅಬ್ಬ ಎಂಥ ಸ್ಪರ್ಧೆ ಅನಿಸಿ, ಆ ಸ್ಪರ್ಧೆಯ ಸನ್ನಿವೇಶದಲ್ಲೇ ನನಗೆ ರಾಜ್ ಕುಮಾರ್ ಮನಸಿಗೆ ಮತ್ತು ಕಣ್ಣಿಗೆ ಹತ್ತಿರವಾಗಿದ್ದು. ಈ ಚಿತ್ರದ ನಂತರ ಅಷ್ಟೇ ಕಾಡಿದ್ದು ಬಬ್ರುವಾಹನ. ಬಬ್ರುವಾಹನ ಸಿನಿಮಾ ನೋಡಿದಾಗ ಇಬ್ಬರು ರಾಜ್ ಕುಮಾರ್ ಗಳು ಇದ್ದರು ಎನಿಸಿತ್ತು. ಬಬ್ರುವಾಹನ ಬಾಡಿ ಲ್ಯಾಂಗ್ವೇಜ್, ಅರ್ಜುನನ ವೇಗತ್ವ ಸೂಪರ್, ಈ ಎರಡೂ ನನ್ನ ಬಾಲ್ಯವನ್ನು ರೂಪಿಸಿದ ಚಿತ್ರಗಳು ಕೂಡ ಹೌದು. ಮಂಗಳುರಿನವನಾಗಿದ್ದ ಕಾರಣ ರಾಜ್ ಕುಮಾರ್ ಅವರನ್ನು ಮುಖತ: ನೋಡಲಾಗಲಿಲ್ಲ. ನಮ್ಮ ತಂದೆ ಶಿವಮೊಗ್ಗದ ಹೋಟೆಲ್ ವೊಂದರಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ಎತ್ತಿಕೊಂಡಿದ್ದಾಗ ನೋಡಿದ್ದನ್ನು ನನಗೆ ಸಾಕಷ್ಟು ಬಾರಿ ಹೇಳಿದ್ದರು. ನಾನು ನೋಡಿಲ್ಲ ಅಂದ್ರೂ ನನ್ನ ತಂದೆ ನೋಡಿದ್ದಾರಲ್ಲ ಎನ್ನುವ ಖುಷಿ ಇದೆ.
 

Vishwas Mysuru

aDDa Junior
ಸಂತ ತುಕಾರಾಮ - 1963
= = = = = =

1963 ರಲ್ಲಿ ಬಂದ ಈ ಚಿತ್ರ ವಿಠಲನ ಅನನ್ಯ ಭಕ್ತ ಸಂತ ಸುಕರಾಮನ ಜೀವನವನ್ನು ಆಧಾರಿಸಿದ್ದು, ಮರಾಠಿ ಪ್ರಾಂತ್ಯದ ಬಹುದೊಡ್ಡ ಜನಮನದ ಆರಾಧ್ಯ ಸಂತ ತುಕಾರಾಮ. ಕನ್ನಡಿಗರ ಮನದಲ್ಲಿ ಇಂದಿಗೂ ಆರಾಧ್ಯನಾಗಿ ಕಂಡಿದ್ದರೆ ಅದು ಡಾ: ರಾಜ್ ಕುಮಾರ್ ಅವರ ತುಕಾರಾಮನ ಉಜ್ವಲ ಅಭಿವ್ಯಕ್ತಿಯ ಪರಿಣಾಮ.

ಸುಂದರ್ ರಾವ್ ನಾಡಕರ್ಣಿ ಅವರ ನಿರ್ದೇಶನದಲ್ಲಿ ಮೂಡಿ ಬಂದು ಈ ಚಿತ್ರದಲ್ಲಿ ರಾಜ್ ಕುಮಾರ್, ಉದಯ ಕುಮಾರ್, ಬಾಲಕಷ್ಣ, ವಾದಿರಾಜ್. ರಾಜಶ್ರೀ, ಲೀಲಾವತಿ, ಪಂಢರಿಬಾಯಿ, ಬೇಬಿ ಸುಮ, ಬೇಬಿ ಕಲಾ, ಸಿ.ವಿ. ಶಿವಶಂಕರ್, ಅಶ್ವಥ್, ಹನುಮಂತಚಾರ್ಯ ಮತ್ತು ಸುಂದರ್ ರಾವ್ ತಾರಾಗಣವಿತ್ತು.

ಗಣೇಶ್ ಪ್ರಸಾದ್ ಮೂವೀಸ್ ಅಡಿಯಲ್ಲಿ ಕಪ್ಪು ಬಿಳುಪಿನಲ್ಲಿ ತಯಾರಾಗಿದ್ದು ಇದರ ನಿರ್ಮಾಪಕರು ಬಿ. ರಾಧಾಕೃಷ್ಣ ರವರು. ಚಿ. ಉದಯ ಶಂಕರ್ ರವರ ಸಂಭಾಷಣೆ, ಚಿ. ಸದಾಶಿವಯ್ಯ ನವರ ಗೀತ ಸಾಹಿತ್ಯ, ವಿಜಯ ಬಾಸ್ಕರ್ ರವರ ಸಂಗೀತ, ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ, ಎಲ್. ಆರ್. ಈಶ್ವರಿ, ಪೀಠಾಪುರಂ ನಾಗೇಶ್ವರ ರಾವ್, ರಾಮದಾಸ್, ಭೋಜರಾವ್ ಹಾಡುಗಳನ್ನು ಹಾಡಿದ್ದಾರೆ.

ಜಯತು ಜಯವಿಠಲ ಪಾಂಡುರಂಗ ಪಂಡರೀನಾಥ ಹಾಡಂತೂ ಕನ್ನಡ ಕುಲಕೋಟಿಯ ನಿತ್ಯಮಂತ್ರವೇ ಆಗಿತ್ತು. ಇಂದಿಗೂ ಆ ಚಾರ್ಮ್ ಹಾಗೆಯೇ ಉಳಿದುಕೊಂಡಿದೆ. ಬೇಡಕೃಷ್ಣ ರಂಗಿನಾಟ ಹಾಡು ಕೂಡ ಅತ್ಯಂತ ಹಿಟ್ ಹಾಡು. ನಿಮಗೆ ಗೊತ್ತೇ ಈ ಚಿತ್ರದಲ್ಲಿ ಹಾಡುಗಳು ಎಷ್ಟು ಅಂತ, ಬರೋಬ್ಬರಿ ಹದಿನೆಂಟು (18) ಹಾಡುಗಳಿವೆ.

ಕನ್ನಡದಲ್ಲಿ ರಾಜ್ ಕುಮಾರ್ ತುಕಾರಾಮನಾಗಿ ಅಭಿನಯಿಸಿ ಇತಿಹ|ಸ ಸೃಷ್ಟಿಸಿದ ಈ ಹೊತ್ತಿನಲ್ಲೇ ಹಿಂದಿಯಲ್ಲಿ ವಿಷ್ಣುಪಂತ್ ಪಗ್ನೀಸ್ ಮಾಡಿದರು. ಆದರೆ ಹಿಂದಿಗಿಂತ ಕನ್ನಡದ ತುಕಾರಾಮನೇ ಜನಮಾನಸವನ್ನು ಗೆದ್ದಿದ್ದು, ಮಂತ್ರಮುಗ್ಧಗೊಳಿಸಿದ್ದು, ಈ ಚಿತ್ರಕ್ಕೆ ರಾಷ್ಟ್ರ ಮಟ್ಟದ ರಜತಪದಕ ಪ್ರಶಸ್ತಿಯೂ ಲಭಿಸಿತು.

ಕನ್ನಡದ ಛಾಯಾಗ್ರಹಕ ಡಿ.ವಿ. ರಾಜಾರಾಂ ಅವರ ಛಾಯಾಗ್ರಹಣದ ಮೊದಲ ಚಿತ್ರವಿದು. ಹಾಗೆಯೇ ಚಿ. ಉದಯಶಂಕರ್ ರವರು ಸಂಭಾಷಣೆ ರಚಿಸಿದ ಪ್ರಥಮ ಚಿತ್ರವೂ ಹೌದು. ಭಕ್ತಿಯ ಪರಕಾಷ್ಠೆಯಲ್ಲಿ ಹುಲ್ಲಿನ ಗೊಣಬೆ ಮೇಲೆ ಕುಳಿತ ತುಕಾರಾಮ ಆ ಗೊಣಬೆಗೆ ಬೆಂಕಿ, ಈ ದೃಶ್ಯದ ಚಿತ್ರೀಕರಣದಲ್ಲಿ ಡಾ: ರಾಜ್ ಪರಕಾಯ ಪ್ರವೇಶದ ಅನನ್ಯತೆ ಎಷ್ಟಿತ್ತೆಂದರೆ ಶಾಟ್ ಮುಗಿದರೂ ಇವರಿಗೆ ಅರಿವಾಗದೆ, ಬೆಂಕಿಯ ಕೆನ್ನಾಲಿಗೆ ದಬ್ ಅಂತ ಆವರಿಸಿ ರಾಜ್ ಅವರ ಮುಖ ತೆಳ್ಳಗೆ ಸುಟ್ಟು ಹೋದದ್ದನ್ನು ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಹಾಘೂ ಸ್ವತ: ಅಣ್ಣಾವ್ರೇ ಹೇಳಿಕೊಂಡಿದ್ದು ಅದೆ.

= = = = = = =
 
Top