Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Vishwas Mysuru

aDDa Junior
ಎಲ್ಲಾ ಪಾತ್ರಗಳನ್ನು ನಿರ್ವಹಿಸಿದ ಡಾ: ರಾಜ್ ದೇವದಾಸ್ ಪಾತ್ರ ಏಕೆ ಮಾಡಲಿಲ್ಲ ?
= = = = = =
ಸಾವು ನೆನಪಿನ ಊದುಗೊಳವೆ ಎಂದು ಬಲ್ಲವರು ಹೇಳುತ್ತಾರೆ. ಈ ಮಾತಿಗೆ ಸ್ವಲ್ಪ ಮಟ್ಟಿನ ಪುಷ್ಟಿ ಕೊಡುವಂತಹ ಕಳೆದ ಶುಕ್ರವಾರ ದಿನಾಂಕ: 03-06-1989 ರಂದು ನಗರದ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಂತೂ ಕಂಡು ಬಂದಿತು. ಬುಧುವರ ರಾತ್ರಿ ನಿಧನರಾದ ಭಾರತೀಯ ಚಿತ್ರರಂಗದ ದಿಗ್ಗಜ ರಾಜ್ ಕಪೂರ್ ರವರ ಶ್ರದ್ಧಾಂಜಲಿ ಸಲ್ಲಿಸಲು ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ನಟರು, ನಿರ್ದೇಶಕರು, ನಿರ್ಮಾಪಕರು ಹಾಗೂ ವಿತರಕರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಕಲಾವಿದರ ನಂತರ ಮಂಡಳಿಯ ಅದ್ಯಕ್ಷ ಶ್ರೀ ಸಿ.ವಿ.ಎಲ್. ಶಾಸ್ತ್ರಿ ರವರ ಕೋಣೆಯಲ್ಲಿ ಆಸೀನರಾಗಿದ್ದ ಡಾ: ರಾಜ್ ಕುಮಾರ್, ದ್ವಾರಕೀಶ್, ರವೀ, ಲಕ್ಷ್ಮಣ್. ಟಿ.ಎನ್. ನರಸಿಂಹನ್ ಮತ್ತಿತರ ಗಣ್ಯರ ಮಾತು ರಾಜ್ ಕುಮಾರ್ ಸವೆಸಿದ ಹಾದಿಯನ್ನು ಕನ್ನಡ ಚಿತ್ರೋದ್ಯಮದೊಡನೆ ಅವರು ಹೊಂದಿದ್ದ ಸಂಪರ್ಕವನ್ನು ಗುರುತಿಸುತ್ತ ಸಾಗಿತ್ತು.

ಈ ಮಧ್ಯೆ ಮಾತು ಬಂಗಾರದ ಮನುಷ್ಯನ ಯಶಸ್ಸಿನ ಬಗ್ಗೆ ಹೊರಳಿದಾಗ, ಸಭಾಸ್ಥಳವು ಕಚೇರಿಯ ವಿಶಾಲ ಸಭಾಂಗಣಕ್ಕೆ ಶಿಫ್ಟ್ ಆಯಿತು. ರಾಜ್ ಕಪೂರ್ ಗೌರವಾರ್ಥ ಚಿತ್ರ ನಿರ್ಮಾಣದ ಎಲ್ಲ ಚಟುವಟಿಕೆಗಳು ರದ್ದಾಗಿತ್ತು. ಉದ್ಯಮದ ಮಂದಿ ಅಂದು ಎಂದಿಗಿಂತ ಹೆಚ್ಚು ವಿರಾಮದಿಂದ ಇದ್ದರು. ಇಂತಹ ಸಂದರ್ಭದಲ್ಲಿ ರಾಜ್ ಕುಮಾರ್ ಅವರ ಬಂಗಾರದ ಮನುಷ್ಯನ ಬಗ್ಗೆ ಹಾಗೂ ಚಿತ್ರರಂಗದ ಇತರ ವ್ಯಕ್ತಿ ಹಾಗೂ ವಿಷಯಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳ ತೊಡಗಿದರು.

ಅನುಭವಗಳ ಸಾರಾಂಶ :

ಬಂಗಾರದ ಮನುಷ್ಯ ಕಾದಂಬರಿ ಓದಿದಾಗ, ಸಿನಿಮಾಕ್ಕೆ ಸಪ್ಪೆ ಎನಿಸಿತ್ತು. ಸಿನಿಮಾ ಮಾಡೋ ಪ್ರಸಂಗ ಬಂದಾಗ, ಅದನ್ನೇ ಬಾಯಿಬಿಟ್ಟು ಹೇಳಿದೆ. ಹೇಗೋ ಏನೋ ಬಂಗಾರದ ಮನುಷ್ಯ ಸಿನಿಮಾ ಆಯ್ತು. ಆದರೆ ಬಿಡುಗಡೆಗೆ ಮುಂಚೆ ಸಿನಿಮಾ ನೋಡಿದಾಗ ಇದೇನಪ್ಪ ಈ ಸಿನಿಮಾ ಓಡುತ್ತಾ ಅಂತ ಅನಿಸ್ತು. ಪುಟ್ಟಣ್ಣೋರು ಹಾಗೆಯೇ ಹೇಳಿದ್ದು, ಪುಟ್ಟಣ್ಣೋರಂತಹ ದೊಡ್ಡೋರು ಹೇಳೋದೇನು ಒಬ್ಬ ಸಾಮಾನ್ಯ ನಟನಾದ ನನಗೆ ಹಾಗನಿಸ್ತಲ್ಲ. ಆದರೆ ಸಿನಿಮಾ ಬಿಡುಗಡೆಯಾದ ಮೇಲೆ ಅದರ ಕಥೆನೇ ಬೇರೆ. ಯಾಕೇ ಹೀಗೆ. ನನಗನ್ನಿಸುತ್ತೆ ಈ ಸಿನಿಮಾ ನಿರ್ಮಾಣದಲ್ಲಿ ನಾವೆಲ್ಲರೂ ನಮ್ಮ ನಿರೀಕ್ಷೆ ಮೀರಿ ನಡೆದಿದ್ದೀವಿ. ಇದು ಬಹಳ ನಿಗೂಢ. ಒಂಥರಾ ದೈವ ನಿಯಮ ಅಂತಾರಲ್ಲ ಹಾಗೆ.

ಈ ಘಟ್ಟದಲ್ಲಿ ರವೀ ಹೇಳಿದ್ದು, ಬಂಗಾರದ ಮನುಷ್ಯ ತೆಲುಗು ಹಾಗೂ ತಮಿಳಿನಲ್ಲಿ ರಿಮೇಕ್ ಮಾಡೋ ಪ್ರಯತ್ನ ನಡೆದ್ವು. ತಮಿಳಿನಲ್ಲಿ ರಿಮೇಕ್ ಆಗಲಿಲ್ಲ. ತೆಲುಗು ರಿಮೇಕ್ ಬಗ್ಗೆ ಪ್ರಸ್ತಾಪವಾದಾಗ, ತೆಲುಗು ನಿರ್ಮಾಪಕರೊಬ್ಬರು ರೆತು ಬಿಡ್ಡಲುಕು ಸಂಬಂಧಿಂಚಿನ ಎನ್ನೆನ್ನೋ ವಚ್ಚಯ್ಯ, ಮಳ್ಳಿ ಮಳ್ಳಿ ಮರೋ ಚಿತ್ರಂ ವಸ್ತೆ ನಡೆಸ್ತುಂದಾ ? ಎಂದರಂತೆ. ಅದಕ್ಕೆ ಇನ್ನೊಬ್ಬ ನಿರ್ಮಾಪಕರು ಹಾಗಲ್ಲ ಬಂಗಾರದ ಮನುಷ್ಯ ಕರ್ನಾಟಕದಲ್ಲಿ ಏಳು ನೂರು ದಿನ ನಡೆದಿದೆ. ಅದನ್ನು ರಿಮೇಕ್ ಮಾಡಿದ್ರೆ ಇಲ್ಲಿ ನೂರು ದಿನ ಓಡಲ್ವಾ ? ಎಂದರಂತೆ. ಕೃಷ್ಣ ನಾಯಕನಾಗಿ ನಟಿಸಿದ ತೆಲುಗಿನ ಬಂಗಾರದ ಮನುಷ್ಯ ಹಲವಾರು ಕೇಂದ್ರಗಳಲ್ಲಿ ಶತದಿನೋತ್ಸವ ಕಂಡಿತು ಹೇಗಿದೆ ?

ಬಂಗಾರದ ಮನುಷ್ಯನ ಯಶಸ್ಸಿನ ವಿಶ್ಲೇಷಣೆ ಈಗ ಏನೇ ಇರಲಿ ಕಸ್ತೂರಿ ನಿವಾಸ ದ ನಂತರ ನಿಮ್ಮದು ಅಂತಹ ಚಿತ್ರ ಇನ್ನೊಂದು ಬಂದಿಲ್ಲ. ಎಂದು ವರದಿಗಾರರು ಕೇಳಿದಾಗ, ರಾಜ್ ದಂಪತಿಗಳು ಹೌದೆಂದು ತಲೆಯಾಡಿಸಿದರು. ಈ ಸಮಯದಲ್ಲಿ ಮತ್ತೆ ನೆನಪಿನಾಳಕ್ಕೆ ಜಾರಿದ ರಾಜ್ ಒಂದು ಚಿತ್ರ ಮಾಡಬಹುದಾಗಿತ್ತು. ನಿರ್ಮಾಪಕರೊಬ್ಬರು ದೇವದಾಸ್ ಚಿತ್ರವನ್ನು ಕನ್ನಡದಲ್ಲಿ ತಯಾರಿಸಲು ಸಿದ್ಧರಿದ್ದರು. ಆದರೆ ನಾನು ದೇವದಾಸ್ ನೋಡಿದ್ದೆ. ನಾನು ಅದನ್ನು ನೋಡಿಲ್ಲದೆ ಇದ್ದಿದ್ರೆ ಆ ಪಾತ್ರವನ್ನು ನನ್ನಲ್ಲಿರುವ ಕಲಾವಿದನ ಕುಲುಮೆಯಲ್ಲಿ ಬಸಿದು, ನನ್ನ ಆಕಾರ, ನಿಲುವು, ಭಂಗಿ, ಸಾಮರ್ಥ್ಯಗಳಿಗೆ ತಕ್ಕಂತೆ ಆ ಪಾತ್ರವನ್ನು ರೂಪಿಸಿಕೊಳ್ಳುತ್ತಿದ್ದೆ. ನಾನು ಆ ಸಿನಿಮಾ ನೋಡಿದ್ರಿಂದ ನಾನು ದೇವದಾಸ್ ಮಾಡಿದ್ರೆ ನಾಗೇಶ್ವರ ರಾವ್ ರಂತಹ ಕಲಾವಿದರಿಗೆ ಅವಮಾನ ಮಾಡಿದ ಹಾಗೆ ಅಂತ ನಿರ್ಮಾಪಕರಿಗೆ ಹೇಳಿದೆ. ವಾಸ್ತವವಾಗಿ ನಾಗೇಶ್ವರ ರಾವ್ ರವರ ಪ್ರತಿಭೆ ನನಗೆ ತಿಳಿದದ್ದು ದೇವದಾಸ್ ನೋಡಿದ ಮೇಲೆಯೇ. ಅದಕ್ಕೆ ಮುಂಚೆ ಅವರ ಎಷ್ಟೋ ಸಿನಿಮಾಗಳನ್ನು ನೋಡಿದ್ದೇನೆ. ಏನಯ್ಯ ಇವ್ನು ಒಳ್ಳೆ ಹೆಣ್ಣಿಗನ ತರಹ ಇದಾನಲ್ಲ ಅನಿಸಿತ್ತು. ದೇವದಾಸ್ ನೋಡ್ದೆ ಸ್ವಾಮಿ ಅಬ್ಬಾ ಅದೇನ್ ಪ್ರತಿಭೆ, ಅದೆಂಥಾ ಕಲಾವಿದ ದೇವರು ಅವರನ್ನು ಚೆನ್ನಾಗಿಟ್ಟಿರಲಿ.

ನೋಡಿ ಒಂದು ಉತ್ತಮವಾದ ಚಿತ್ರ ಬಂದಾಗ ಅದನ್ನು ಇನ್ನೊಂದು ಭಾಷೇಲಿ ನಿರ್ಮಿಸೋದು ಸಾಧಾರಣ. ಆದರೆ ಅಂತಹ ಚಿತ್ರದಲ್ಲಿ ಪಾತ್ರ ವಹಿಸೋ ಕಲಾವಿದರು ಮೂಲ ಚಿತ್ರ ನೋಡದಿದ್ದರೆ ಒಳಿತು ಅನ್ನೋದು ನನ್ನ ಅಭಿಪ್ರಾಯ. ಉದಾಹರಣೆಗೆ ಕಸ್ತೂರಿ ನಿವಾಸ ಹಿಂದಿ ಮತ್ತು ತಮಿಳು ಎರಡರಲ್ಲೂ ಬಂತು. ಆದರೆ ಇಲ್ಲಿಯಷ್ಟು ಅಲ್ಲಿ ಯಶಸ್ವಿಯಾಗಲಿಲ್ಲ. ಅಲ್ಲಿನ ಪಾತ್ರಧಾರಿಗಳು ಬಹುಶ: ಮೂಲ ಚಿತ್ರ ನೋಡಿದ್ರೂ ಅಂತ ಕಾಣುತ್ತೆ. ಹಿಂದಿಯಲ್ಲಿ ಅಂತೂ ಸಂಜೀವ್ ಕುಮಾರ್ ಅಭಿನಯಿಸಿದ್ರು. ಆ ಸಂದರ್ಭದಲ್ಲೇ ನನಗೆ ಅವರ ಪರಿಚಯವಾಯ್ತು. ನಮ್ಮಿಬ್ಬರ ಭೇಟಿ ಒಂದು ತರಹ ಸಿನಿಮಾ ದೃಶ್ಯದ ಹಾಗೆ ಆಯ್ತು. ಮದರಾಸಿನ ಎ.ವಿ.ಎಂ. ಸ್ಟುಡಿಯೋದಲ್ಲೇ ಅವರದೊಂದು ಸಿನಿಮಾ, ನನ್ನದೊಂದು ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ನಾನು ಮೇಕಪ್ ಮಾಡಿಕೊಂಡು ಫ್ಲೋರಿಗೆ ಹೊರಟಿದ್ದೆ, ನನ್ನ ಎದುರಿಗೆ ಅವರು ಬಂದರು. ಇಬ್ಬರು ನಮ್ಮ ನಮ್ಮ ದಿಕ್ಕುಗಳಲ್ಲಿ ಎರಡು ಹೆಜ್ಜೆ ಇಟ್ಟೆವು. ನಾನು ಥಟ್ಟನೆ ನಿಂತು ಹಿಂತಿರುಗಿದೆ, ಅವರೂ ಸಹ ಹಾಗೇ ಮಾಡಿದರು. ಇಬ್ಬರೂ ಎರಡು ಹೆಜ್ಜೆ ಮುಂದಿರಿಸಿದಾಗ, ಅವರು Are Not you Mr. Rajkumar ಎಂದರು. ನಾನು Yes sir it is my pleasure to meet you ಎಂದೆ. ಅವರು It is my pleasure. I am your fan ಎಂದರು. ನಾನೂ ಅದನ್ನೇ ಹೇಳಿದೆ. ಎಂಥ ದೊಡ್ಡ ಕಲಾವಿದ, ಅಂತಾವ್ರು ನಾನು ನಿಮ್ಮ ಫ್ಯಾನ್ ಅಂತ ನನಗೆ ಹೇಳಿದ್ರೆ ನನಗೇನಾಗಬೇಡ...

ರಾಜ್ ಅವರ ಮಾತು ಹಾಗೇ ಸಾಗಿ, ಕಳೆದ ದಿನಗಳ ಚಿತ್ರ ಸಂಗೀತ ಹಾಗೂ ಸಾಹಿತ್ಯಗಳ ಸುಗಂಧವನ್ನು ಅಲ್ಲಿದ್ದವರಿಗೆ ಸಿಂಪಡಿಸುತ್ತಿತ್ತು. ಅವರ ದೇವತಾ ಮನುಷ್ಯ ಚಿತ್ರ ಬಿಡುಗಡೆಗೆ ಸಿದ್ದವಾಗುತ್ತಿದೆ. ಉದ್ಯಮದ ವಲಯದಲ್ಲಿ ಅದರಲ್ಲೂ ಉತ್ತಮ ಅಭಿರುಚಿಯುಳ್ಳ ಉದ್ಯಮದ ಮಂದಿಯ ಪ್ರಕಾರ ದೇವತಾ ಮನುಷ್ಯ ನಮ್ಮ ಚಿತ್ರರಂಗದ ವಿಶಿಷ್ಟ ಕೃತಿಯಾಗುತ್ತದೆ. ರಾಜ್ ಕುಮಾರ್ ರವರ ಮೇರು ಕೃತಿಯಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದಾರೆ.
 

Vishwas Mysuru

aDDa Junior
90 ರ ದಶಕದಲ್ಲಿ ರವಿಚಂದ್ರನ್ ಅವರು ಒಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ ಮಾತುಗಳು, ಇನ್ನೂ ನೆನಪಿದೆ
*ಕನ್ನಡ ದಲ್ಲಿ ಡಾ.ರಾಜ್ ಕುಮಾರ್ ಅವ್ರೆ ನಂಬರ್ ಒನ್ ನಟರು, ನಂಬರ್ ಒನ್ ಟೂ ಟೆನ್ ಎಲ್ಲ ಡಾ.ರಾಜ್ ಅವ್ರೆ. ಉಳಿದ ನಟರು ಲೆವೆನ್, ಟ್ವೆಲ್
ಎಕೆಂದರೆ ನಂಬರ್ ಟೂ ಅಂದರೆ ಡಾ.ರಾಜ್ ಅವರ ಸಮೀಪ ಹೋದ ಹಾಗೆ ಆಗುತ್ತದೆ, ಅವರ ಸಮೀಪ ಹೋಗೋದಿಕ್ಕು ಯಾವುದೇ ನಟನಿಗೆ ಸಾಧ್ಯವಿಲ್ಲ.
ನಾವು ಗಳು ಎನಿದ್ದರೂ ಹನ್ನೊಂದು, ಹನ್ನೆರಡರ ಸ್ಥಾನ ಅಷ್ಟೇ*
 
Top