Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Vishwas Mysuru

aDDa Junior
ಹುಟ್ಟುತ್ತಾ ಅಣ್ಣ ತಮ್ಮ ಬೆಳೆಯುತ್ತಾ ದಾಯಾದಿಗಳು ಅನ್ನುತ್ತದೆ ಒಂದು ಗಾದೆ ... ಅದು ಸುಳ್ಳು ಎಂದು ಸಾಬೀತು ಗೊಳಿಸಿದ್ದು ರಾಜ್ ಸಹೋದರರು ..

ವರದಪ್ಪ ಇವರು ತಮ್ಮ ಚಿಕ್ಕಂದಿನಿಂದ ಅದ್ಭುತ ನಟನ ಕೌಶಲ್ಯ ಮೆರೆದ ವ್ಯಕ್ತಿ ಹಾಗಾಗಿ ಗುಬ್ಬಿ ಕಂಪೆನಿಯಲ್ಲಿ ಅಣ್ಣಾ ಮುತ್ತು ರಾಜನಿಗಿ೦ತ ಈ ತಮ್ಮಣ್ಣನಿಗೆ ಹೆಚ್ಚು ಸಂಬಳ ...
ಅದೇನನ್ನಿಸಿತೋ ವರದಪ್ಪ ಅವರಿಗೆ ಅಣ್ಣ ಬೆಳೆಯಬೇಕು ಎಂಬ ಛಲ ...
ಬೇಕೆಂದೇ ನಾಟಕ ಪ್ರದರ್ಶನದ ದಿನ ಹೊಟ್ಟೆ ನೋವು ಎಂದು ಮಲಗಿಬಿಡುತ್ತಿದ್ದರು ಅವರ ಪಾಲಿನ ಪಾತ್ರ ಮುತ್ತುರಾಜ್ ಪಾಲಾಗುತ್ತಿತ್ತು
..ಹೆಚ್ಚಿದ ಅವಕಾಶಗಳಿಂದಾಗಿ ಮುತ್ತು ರಾಜ್ ತಮ್ಮ ನಟನಾ ಪ್ರತಿಭೆ ಸಾಬೀತುಗೊಳಿಸುವ ಅವಕಾಶ ಒದಗಿ ಬಂತು ..
ರಂಗಭೂಮಿಯ ಈ ಘಟ್ಟ ಮುಗಿದು ಸಿನಿಮಾ ವೃತ್ತಿ ಜೀವನಕ್ಕೆ ರಾಜ್ ಬಂದ ಮೇಲೆ ಅವರನ್ನು ಸಂಪೂರ್ಣವಾಗಿ ಅಭಿನಯದಲ್ಲಿ ತೊಡಗಿಕೊಳ್ಳುವಂತೆ ಮಾಡಲು ಇವರು ಹೆಗಲೊಡಿ ನಿಂತರು.. ರಾಜ್ ಇವರನ್ನು " ಅಪ್ಪಣ್ಣ" ಎಂದು ಪ್ರೀತಿ ತುಂಬಿ ಕರೆಯುತ್ತಿದ್ದರು

ವರದಪ್ಪನವರು ಕೂಡ ಹೆಚ್ಚು ಶಾಲೆ ಕಲಿತವರಲ್ಲ ಆದರೆ ಒಂದು ಕಲೆಯ ಮೂಲಕ ವಸ್ತುವನ್ನು ಗ್ರಹಿಸುವ ಶಕ್ತಿ ಅವರಲ್ಲಿತ್ತು ..ರಾಜ್ ಯಾವುದೇ ಚಿತ್ರದಲ್ಲಿ ಅಭಿನಯಿಸಲಿ ಅದರ ಕಥೆಯನ್ನು ತಿಳಿದು ಅಗತ್ಯವಾದರೆ ಪರಿಷ್ಕರಿಸಿ ಒಪ್ಪುವ ಕೆಲಸ ಮಾಡುತ್ತಿದ್ದುದು ಇವರೇ .. ಅದನ್ನು ಅಣ್ಣನಿಗೆ ವಿವರಿಸುತ್ತಿದ್ದರು ಇವರೇ... ಅವರು ಅಣ್ಣಾವರ ಬೆನ್ನೆಲುಬಾಗಿ ನಿಂತವರು ..ಅವರ ಕಥೆಯ ಆಯ್ಕೆ.. ಸಿನಿಮಾ ನಿರ್ದೇಶಕರು ... ನಾಯಕಿಯ ಆಯ್ಕೆ .. ಇವರು ಪಾರ್ವತಮ್ಮ ಹಾಗೂ ಅಣ್ಣಾವ್ರ ಜೊತೆ ಕೂತು ಚರ್ಚಿಸುತ್ತಿದ್ದರು .. ಅಣ್ಣಾವರ ಬಹುತೇಕ ಯಶಸ್ವಿ ಸಿನಿಮಾಗಳ ಪಾಲು ಇವರಿಗೂ ಸೇರಿದೆ.. .

ತಮ್ಮ ಕೊನೆಯ ದಿನಗಳಲ್ಲಿ ಅವರು ತಮ್ಮ ಕಾಯಿಲೆ ಮಲಗಿದ್ದಾಗ ಇವರು ಖಿನ್ನ ರಾದರು ರಾಜ್ ..ಅವರು ತೀರಿಕೊಂಡ ನಂತರ ಬದುಕುವ ಹಂಬಲವನ್ನು ಕಳೆದುಕೊಂಡರಾದರೂ ರಾಜ್ ..

ಒಮ್ಮೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಸೋದರರ ಆಗಲುವಿಕೆಗೆ ಸ್ವಾಂತನ ಹೇಳಲು ಫೋನ್ ಮಾಡಿದರು ..ಇಳಿ ವಯಸ್ಸಿನಲ್ಲಿ ಇದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ಕೊರಗುವುದು ಸರಿಯಲ್ಲ ಎಂದಾಗ.... ..ರಾಜ್ ಅವರು ಹೌದಲ್ಲ "ಹುಟ್ಟ್ಟು ಉಚಿತ ಸಾವು ಖಚಿತ "ಎಂದರು.
ಇದೇ ಅಣ್ಣಾರ್ರಮತ್ತು ಅವರ ಸಹೋದರನ ಬಾಂಧವ್ಯ..
 
Top