Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Vishwas Mysuru

aDDa Junior
ಶಂಕರ್ ಗುರು ಚಿತ್ರದ ಬಗ್ಗೆ ಇನ್ನೊಂದಿಷ್ಟು ಮಾಹಿತಿಗಳು
= = = = =

1) ಡಾ: ರಾಜ್ ಕುಮರ್ ರವರು ತ್ರಿಪಾತ್ರಗಳಲ್ಲಿ ಅಭಿನಯಿಸಿದ ಎರಡನೇ ಚಿತ್ರ. ಒಂದು ವರ್ಷಕ್ಕೂ ಹೆಚ್ಚು ಕಾಲ ಓಡಿದ ಚಿತ್ರ. ಈ ಚಿತ್ರ ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯುತ್ತಿರುವಾಗ, ಅಲ್ಲಿನ ಸ್ಥಳಿಯವರು ಚಿತ್ರದ ಶಂಕರ್ ಮತ್ತು ಗುರು ಪಾತ್ರಗಳಿಗೆ ಡ್ಯೂಪ್ ಹಾಕುತ್ತಿದ್ದವರಲ್ಲಿ ಹಿಂದಿ ಬಾಷೆಯಲ್ಲಿ ಇಲ್ಲಿ ಯಾವ ಚಿತ್ರದ ಶೂಟಿಂಗ್ ನಡೆಯುತ್ತಿದೆ ಅಂತ ಕೇಳಿದಾಗ, ಡ್ಯೂಪ್ ಪಾತ್ರಧಾರಿಗಳು ತಮಗೆ ಅಲ್ಪ ಸ್ವಲ್ಪ ತಿಳಿದ ಹಿಂದಿ ಭಾಷೆಯಲ್ಲಿ ಹಮ್ ಶಂಕರ್ ಹೈ, ಓ ಗುರು ಹೈ, ಇಸ್ಕಿ ಮತಲಬ್ ಏ ಶಂಕರ್ ಗುರು ಹೈ ಅಂತ ಹೇಳಿದಾಗ, ಅಲ್ಲಿಯೇ ಇದ್ದ ಅಣ್ಣಾವ್ರು ಪಾರ್ವತಮ್ಮನವರಿಗೆ ಪಾರ್ವತಿ ಈ ಹೆಸರೇ ಸಿನಿಮಾಕ್ಕೆ ಸೂಕ್ತವಾಗಿದೆಯಲ್ಲವೇ? ಅಂತ ಹೇಳಿ ಅದೇ ಹೆಸರನ್ನು ಇಟ್ಟಿದ್ದಕ್ಕೆ ಇತಿಹಾಸವೇ ನಿಬ್ಬೆರಗುಗೊಳ್ಳುವಂತಾಯಿತು. ಶಂಕರ್ ಗುರು ಚಿತ್ರವೊಂದರ ಹೆಸರಾಗಿ ವಿರಾಜಮಾನವಾಯಿತು.

2) ಚಿತ್ರದಲ್ಲಿ ಖಳನಟರ ಪಾತ್ರಕ್ಕೆ ತೂಗುದೀಪ ಶ್ರೀನಿವಾಸ, ವಜ್ರಮುನಿ, ಶನಿ ಮಹದೇವಪ್ಪ ಇವರ ಪಾತ್ರಗಳನ್ನು ಮುಂಬೈ ಕಲಾವಿದರನ್ನು ಕರೆಯಿಸಿ ಮಾಡಿಸೋಣ, ಇವರಿಗೆಲ್ಲ ಸೂಟು ಬೂಟು ಹೊಂದುವದಿಲ್ಲ ಅಂತ ನಿರ್ದೇಶಕರ ಹಾಗೂ ಮತ್ತಿತರ ಮಾತಿಗೆ ನೋಡಿ ಈ ನಿಮ್ಮ ರಾಜ್ ಕುಮಾರನಿಗೂ ಪ್ಯಾಂಟು ಶರ್ಟ ಹೊಂದೋಲ್ಲ ಅಂತ ಅಂದಿದ್ರು. ಯಾವುದೇ ಆದರೂ ಪ್ರಯತ್ನಿಸದೇ ಒಗ್ಗೋದು ಹೇಗೆ? ಹಾಕಿಸಿ ಅವರಿಗೂ ಹೊಂದುತ್ತೆ. ಮುಂಬೈ ಕಲಾವಿದರು ಇಲ್ಲಿಗೆ ಬರುತ್ತಾರೆ ಸರಿ, ಆದರೆ ಇವರನ್ನು ಮುಂಬೈಗೆ ಕಳಿಸೋಕೆ ಆಗುತ್ತಾ ಇಲ್ಲವಲ್ಲ. ಅವರ ಹೊಟ್ಟೆ ಹೊಡೆಯೋ ಕೆಲಸ ಮಾಡೋದು ಬೇಡ, ಈ ಮೂವರಿಂದಲೇ ಮಾಡಿಸಿ, ಇಲ್ಲ ಅಂದರೆ ಸಿನಿಮಾನೇ ಕೈ ಬಿಟ್ಟುಬಿಡಿ ಅಂತ ವರನಟರು ತುಸು ಖಡಕ್ಕಾಗಿಯೇ ಹೇಳಿದಾಗ, ಇವರನ್ನೇ ಹಾಕಿಕೊಳ್ಳಲಾಯಿತು. ಸಿನಿಮಾ ಒಂದು ವರ್ಷ ಓಡಿ ದಾಖಲೆ ನಿರ್ಮಿಸಿತು.

3) ಲವ್ ಮೀ ಆರ್ ಹಿಟ್ ಮೀ ಈ ಹಾಡನ್ನು ಹಾಡುವಾಗ ಅಣ್ಣಾವ್ರು ಮೊದಲು ಒಪ್ಪಿರಲಿಲ್ಲ. ಕನ್ನಡವೇ ಸರಿಯಾಗಿ ಬರದ ನಮಗೆ ಇಂಗ್ಲೀಷ್ ಹಾಡು ಬೇರೆ.ನಮಗೆ ಇಂಗ್ಲೀಷಿನ ಸಹವಾಸ ಬೇಕೆ ಅಂತ ಅಂದ್ರಿದಂತೆ. ನಂತರ ಉಪೇಂದ್ರ ಕುಮಾರ್, ಚಿ. ಉದಯಶಂಕರ್ ಅವರೆಲ್ಲರ ಒತ್ತಾಯಕ್ಕೆ ಮಣಿದು ಹಾಡಿದರಂತೆ. ಹಾಡಿನ ಧ್ವನಿ ಮುದ್ರಣದ ಕಾಲಕ್ಕೆ ಅಣ್ಣಾವ್ರು ಹಿರಿಯ ನಟ ಸಂಪತ್ ರವರಿಗೆ ಪದೇ ಪದೇ ಕೇಳಿ ತಪ್ಪಾಯ್ತ ನೋಡಿ ಅಂತ ಕೇಳಿ ಕೇಳಿ ಹಾಡಿದರಂತೆ. ಆ ಹಾಡು ಇಂದಿಗೂ ಹಳ್ಳಿ ಪೇಟೆ ಎನ್ನದೆ ಜನಪ್ರಿಯವಾಯಿತು.

4) ಈ ಇಂಗೀಷ್ ಮಿಶ್ರಿತ ಹಾಡಿನ ಚಿತ್ರೀಕರಣದಲ್ಲಿ ಡಾ: ರಾಜ್ ಕುಮಾರ್ ಹಿಪ್ಪಿ ಕೂದಲು, ಬೆಲ್ ಬಾಟಂ ಪ್ಯಾಂಡ್, ಹೆಗಲಲ್ಲಿ ಗಿಟಾರ್, ಇಂಗ್ಲೀಷ್ ಹಾಡು ಬೇರೆ, ಯಾರೋ ಇಬ್ಬರೂ ವಿದೇಶಿಗರು ಬಂದು ಅಣ್ಣಾವ್ರಿಗೆ ನೀವು ಯಾವ ದೇಶದವರು ಅಂತ ಕೇಳಿದ್ರಂತೆ. ನಿಜಕ್ಕೂ ಈ ವ್ಯಕ್ತಿ ಫಾರಿನ್ನರ್ ಅಂತ ಆ ವಿದೇಶಿಗರ ಭಾವನೆ.
 

JAMES™

Moderator'ಬಂಗಾರದ ಮನುಷ್ಯ' ಚಿತ್ರದ ನಂತರ
ಐತಿಹಾಸಿಕ ದಾಖಲೆ ನಿರ್ಮಿಸಿದ ಚಿತ್ರ
#ಶಂಕರ್_ಗುರು

ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರ ನಿರ್ಮಾಣದಲ್ಲಿ,ವಿ.ಸೋಮಶೇಖರ್ ನಿರ್ದೇಶನದಲ್ಲಿ,ನಟಸಾರ್ವಭೌಮ ಡಾ||ರಾಜ್ ಕುಮಾರ್ ಅವರ ತ್ರಿಪಾತ್ರ ಅಭಿನಯದಲ್ಲಿ ಬಂದ ಮೆಗಾ ಬ್ಲಾಕ್ ಬಸ್ಟರ್ ಚಿತ್ರ.'ಸಾಗರ್' ಚಿತ್ರಮಂದಿರದಲ್ಲಿ ಸತತ 54 ವಾರಗಳ
ಪ್ರದರ್ಶನ,ನಂತರ ಮುಂದುವರೆದು
'ಕೆಂಪೇಗೌಡ' ಚಿತ್ರಮಂದಿರದಲ್ಲಿ 4 ವಾರಗಳ ಪ್ರದರ್ಶನ.ಒಟ್ಟು 58 ವಾರ.ಇನ್ನೂ ಓಡುತ್ತಿತ್ತು,ಹೊಸ ಚಿತ್ರಗಳಿಗೆ ದಾರಿ ಮಾಡಿಕೊಡುವುದು ಪಾರ್ವತಮ್ಮನವರ ಅಭ್ಯಾಸ..

1978ರಲ್ಲಿ ಆಗಿನ ಕಾಲಕ್ಕೆ ನಿವ್ವಳ 4.17 ಕೋಟಿ ಗಳಿಕೆ.
Inflation ಗೆ ಹೊಂದಿಸಿಕೊಂಡರೆ ಈಗಿನ ಮೌಲ್ಯಕ್ಕೆ ಸುಮಾರು 400 ಕೋಟಿ ಮೇಲೆ ದಾಟುತ್ತದೆ

ಆಗ ಚಿತ್ರಗಳ ಮೊದಲ
ಬಿಡುಗಡೆ 12 ರಿಂದ 16 ಕೇಂದ್ರಗಳಲ್ಲಿ.
ಮೈಸೂರು ಕರ್ನಾಟಕ ಹಾಗೂ
ಹೈದರಾಬಾದ್ ಕರ್ನಾಟಕದಲ್ಲಿ.
ಎರಡು ತಿಂಗಳ ನಂತರ
ಮುಂಬೈ ಕರ್ನಾಟಕದಲ್ಲಿ
8 ರಿಂದ 10 ಕೇಂದ್ರಗಳಲ್ಲಿ ಬಿಡುಗಡೆ.

ಅಲ್ಲದೇ ಟಿಕೆಟ್ ಬೆಲೆ
50 ಪೈಸೆಯಿಂದ 1.50 ರೂಪಾಯಿವರೆಗೆ ಮಾತ್ರ.
ನಯಾ ಪೈಸೆಗಳ ಕಾಲದಲ್ಲೇ ಕನ್ನಡ ಒಂದೇ ಭಾಷೆಯಲ್ಲಿ ಬಿಡುಗಡೆ ಆಗಿ ಕೋಟಿ ಕೋಟಿ ಬಾಚಿದ್ದು ಅಣ್ಣಾವ್ರ ಚಿತ್ರ.ಈಗಿನ 100-200 ಕೋಟಿಗಳು ಇದರ ಮುಂದೆ ಯಾವ ಲೆಕ್ಕ...

ಕನ್ನಡ ವರ್ಣಮಾಲೆಗೆ 'ಅ' ನಂ.1
ಕನ್ನಡ ಚಿತ್ರರಂಗಕ್ಕೆ ಎಂದೆಂದಿಗೂ 'ಅ'ಣ್ಣಾವ್ರೇ ನಂ.1

ರಸಿಕರ ರಾಜ,ನಟಸಾರ್ವಭೌಮ,ಕೆಂಟಕಿ ಕರ್ನಲ್,ಪದ್ಮಭೂಷಣ,ಗಾನಗಂಧರ್ವ,ಕರ್ನಾಟಕ ರತ್ನ,ಕನ್ನಡ ಕಂಠೀರವ ಡಾ||ರಾಜ್ ಕುಮಾರ್ ತ್ರಿಪಾತ್ರದಲ್ಲಿ ಅಭಿನಯಿಸಿರುವ 'ಶಂಕರ್ ಗುರು' ನಂ.1

#KannadaGreatMovies #DrRajkumar #ChiUdayashankar #VSomashekhar #ShankarGuru

ಚಿತ್ರ ಮಾಹಿತಿ ಕೃಪೆ: Mallikarjun Meti ಮತ್ತು Rajanish Ha


Sent from my iPhone using Tapatalk
 
Top