Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Vishwas Mysuru

aDDa Junior
ಒಲವಿನ ಸೋದರಿ ಬಿ.ಸಿ ಗಾಯತ್ರಿಯವರಿಗೆ..
ನಮಸ್ಕಾರ - ತುಂಬು ಅಭಿಮಾನದಿಂದ ತಾವು ನನಗೆ 23/1/81 ರಲ್ಲಿ ಬರೆದ ಪತ್ರ ತಲುಪಿದೆ.ವಂದನೆಗಳು.ನನ್ನ ಹಲವಾರು ಚಿತ್ರ ನೋಡಿ,ನನ್ನ ಹಲವಾರು ಚಿತ್ರಗೀತೆ,ಭಕ್ತಿಗೀತೆ ಆಲಿಸಿ,ಹರ್ಷಪಟ್ಟು ಮೆಚ್ಚುಗೆ ವ್ಯಕ್ತಪಡಿಸಿರುತ್ತೀರಿ,ಧನ್ಯವಾದ.ತಮ್ಮಂಥ ಸೋದರಿಯರ ಹಾರೈಕೆ,ಹಿರಿಯರ ಆಶೀರ್ವಾದ, ಶ್ರೀಗುರು ರಾಘವೇಂದ್ರರ ಕೃಪೆ ನನ್ನ ಏಳಿಗೆಗೆ ದಾರಿದೀಪ.ನನ್ನೆಲ್ಲಾ ಕೀರ್ತಿ,ಪದವಿ,ಬಿರುದು ಬಾವಲಿ ತಮ್ಮಗಳ ಪ್ರೀತಿಯ ಕೊಡುಗೆ.ತಾವು ಸದಾ ಸರ್ವಮಂಗಳೆಯಾಗಿ,ಸದ್ಗುಣ ಸಂಪನ್ನೆಯಾಗಿ,ಕೊಟ್ಟ ಮನೆಗೂ ಕೂಡಿದ ಮನೆಗೂ ಕೀರ್ತಿಯ ಕಳಶವಾಗಿರಿ.ಈ ಪತ್ರದೊಂದಿಗೆ ನನ್ನ ಫೋಟೋ ಕಳುಹಿಸಿರುವೆ..

ಎಂದೆಂದಿಗೂ ನಿಮ್ಮ ಸೋದರನೇ,

ರಾಜಕುಮಾರ
 

Arvi

Moderator
Staff member
ಅಂದು ಶಂಕರನಾಗ್ ಸಂತಾಪ ಸಭೆಯಲ್ಲಿ ಡಾ.ರಾಜ್ ಆಡಿದ್ದ ಮಾತುಗಳೇನು ?
 
Top