Hatrick Hero Sandalwoodking Dr.ShivaRajkumar - Shivanna - Film Actor, Playback Singer, Philanthropis

Janardhana Rao

Janardhana Rao Salanke
Book2.jpg
ಡಾ.ಶಿವಣ್ಣ ಅವರ ಪುಸ್ತಕ ಬಿಡುಗಡೆಗೊಂಡ ದಿನ, ಮನೆಯಲ್ಲಿ ಪೂಜೆ ಮಾಡಿದ ಅಮೃತ ಘಳಿಗೆ - 12.7.2018.
ನನ್ನ ಮೆಚ್ಚಿನ ಚಿತ್ರಪಟ.
 

Bhavani

aDDa Junior
ಹ್ಯಾಟ್ರಿಕ್ ಹೀರೋ ಸರ್ಕಲ್ ರಮ್ಮನಹಳ್ಳಿ ಮೈಸೂರುIMG-20200712-WA0091.jpgIMG-20200712-WA0090.jpg

Sent from my vivo V3 using Tapatalk
 

Bhavani

aDDa Junior
ಕಾಲೇಜು ಓದುತ್ತಿದ್ದ ಇವರ ಮುಂದೆ ಎರಡು ದಾರಿಗಳಿದ್ದವು............
ಮೊದಲನೆಯ ದಾರಿ ಹೀರೋ ಆಗುವುದು ....ಅದಕ್ಕೆ ಆತ್ಮವಿಶ್ವಾಸದ ಜೊತೆಗೆ ಅತೀವ ಶ್ರದ್ಧೆ ಮತ್ತು ಕಠಿಣ ಪರಿಶ್ರಮದ ಅಗತ್ಯವಿತ್ತು , ಹೊರನೋಟಕ್ಕೆ ಇವರಿಗೆ ಯಾವುದೇ ಸ್ಪರ್ಧೆ ಇಲ್ಲ ಅಂತ ಅನಿಸಿದರೂ ಅಸಲಿ ಸ್ಪರ್ಧೆ ಇದ್ದಿದ್ದು ಇವರ ಮನೆಯಲ್ಲೇ, ನಟನೆಗೇ ಸಾರ್ವಭೌಮನಂತಿದ್ದ ತಂದೆ ಮತ್ತು ಎಳೆಯ ವಯಸ್ಸಿನಲ್ಲಿಯೇ ರಾಷ್ಟ್ರಪ್ರಶಸ್ತಿಯನ್ನು ಎಳೆದು ತಂದಂತಹ ಪವರ್ ಫುಲ್ ತಮ್ಮ , ಎಲ್ಲದಕ್ಕಿಂತಾ ಹೆಚ್ಚಾಗಿ ಅಣ್ಣಾವ್ರ ಮಗ ಅನ್ನೋ ದೊಡ್ಡ ಹೊರೆ.

ಎರಡನೇ ದಾರಿ.... ಸಿಎಂ ಬಂಗಾರಪ್ಪನವರ ಅಳಿಯ ಅನ್ನೋದು, ಇದು ದಾರಿ ಅನ್ನೋದಕ್ಕಿಂತ ಹೆದ್ದಾರಿ ಅನ್ನೋ ಥರ ಇತ್ತು , ಮನಸ್ಸಿಗೆ ತೋಚಿದ್ದು ಮಾಡಬಹುದಾಗಿತ್ತು , ದೊಡ್ಡ ಮಟ್ಟದ ಹೂಡಿಕೆ , ವ್ಯಾಪಾರ, ವ್ಯವಹಾರ.... ಕುಂತ ಜಾಗದಲ್ಲೇ ಸಾವಿರಾರು ಕೋಟಿ ಗಳಿಸುವ ಅವಕಾಶ ಇತ್ತು , ದೇಶ ವಿದೇಶ ಸುತ್ತುತ್ತಾ ಮೋಜು ಮಸ್ತೀ ಮಾಡಿಕೊಂಡು ವಿಲಾಸೀ ಜೀವನ ಅನುಭವಿಸಬಹುದಾಗಿತ್ತು .

ಸವಾಲೆನಿಸಿದರೂ ಶಿವಣ್ಣ ಆಯ್ಕೆ ಮಾಡಿಕೊಂಡಿದ್ದು ಮೊದಲನೆಯ ದಾರಿಯನ್ನೇ ....ಅದರಂತೆ 'ಆನಂದ್' ಸಿನಿಮಾ ಮುಹೂರ್ತವಾಗಿ ಚಿತ್ರೀಕರಣ ಮುಗಿದು ಬಿಡುಗಡೆಯಾಯಿತು....ಕಂಡು ಕೇಳರಿಯದಂತಹ ಅಭೂತಪೂರ್ವ ಯಶಸ್ಸು ಪಡೆಯಿತು.
ಒಂದಷ್ಟು ಜನ ಅಣ್ಣಾವ್ರ ಮಗ ಅಂತ ಥಿಯೇಟರ್ಗೆ ಜನ ಬಂದ್ರು ಅಂದ್ರು, ಸರಿ ಎರಡನೇ ಸಿನಿಮಾ ? ಅದೂ ಬಿಡುಗಡೆಯಾಗಿ ರಾಜ್ಯದಾದ್ಯಂತ ಅದ್ಭುತವಾದ ಯಶಸ್ಸನ್ನ ದಾಖಲಿಸಿತು......
ನಿರ್ದೇಶಕರು ನಟಿಸು ಅಂದಾಗ , ನೃತ್ಯ ನಿರ್ದೇಶಕರು ನರ್ತಿಸು ಅಂದಾಗ , ಸಾಹಸ ನಿರ್ದೇಶಕರು ಫೈಟ್ ಮಾಡು ಅಂದಾಗ ...'ಅಣ್ಣಾವ್ರ ಮಗ' ಅನ್ನೋ ಪದ ಮಾಡುತ್ತಾ ಶಿವಣ್ಣ ಮಾಡ್ಬೇಕಾ ? ಆಯ್ತು 'ರಾಜ್ ಕುಮಾರ್ ಮಗ' ಅನ್ನೋ ಮಾತು ಪ್ರೇಕ್ಷಕರನ್ನ ಥಿಯೇಟರ್ ವರೆಗೂ ಕರ್ಕೊಂಡ್ ಬರುತ್ತೆ ಆಮೇಲೆ ? ಥಿಯೇಟರಿಗೆ ಬಂದ ಅಷ್ಟೂ ಪ್ರೇಕ್ಷಕರನ್ನ ತನ್ನ ಅಭಿನಯದಿಂದ ಅಭಿಮಾನಿಗಳನ್ನಾಗಿಸಿಕೊಂಡದ್ದು ಮಾತ್ರ ಶಿವಣ್ಣನೇ.
ಆನಂದ್, ರಥಸಪ್ತಮಿ, ಮನ ಮೆಚ್ಚಿದ ಹುಡುಗಿ ಈ ಸತತ ಮೂರು ಸಿನಿಮಾಗಳು ರಾಜ್ಯದಾದ್ಯಂತ ಜಯಭೇರಿ ಬಾರಿಸಿ ರಜತೋತ್ಸವ ಆಚರಿಸುವುದರ ಮೂಲಕ ಅಷ್ಟು ದಿನ ಕ್ರೀಡಾ ಕ್ಷೇತ್ರದಲ್ಲಿದ್ದ " ಹ್ಯಾಟ್ರಿಕ್ " ಅನ್ನೋ ಪದವನ್ನು ಪ್ರಪ್ರಥಮ ಬಾರಿಗೆ ಸಿನಿಮಾ ಕ್ಷೇತ್ರಕ್ಕೆ ಹೊತ್ತು ತಂದರು. ಅಂದಿನಿಂದ ಇಂದಿನವರೆಗೂ ಬರೋಬ್ಬರಿ ನಾಲ್ಕು ದಶಕಗಳ ಕಾಲ ಚಿತ್ರರಸಿಕರನ್ನು ತಮ್ಮ ನಟನೆ ಹಾಗೂ ನೃತ್ಯದ ಮುಖೇನ ಮನರಂಜಿಸ್ತಲೇ ಬಂದಿದ್ದಾರೆ ....

ಸಮಾಜದಲ್ಲಿ ಸರಳ ವ್ಯಕ್ತಿಯಾಗಿ , ಸೆಟ್ಟಲ್ಲಿ ಅಗಾಧ ಶಕ್ತಿಯಾಗಿ , ಗೆಳೆಯರ ಬಳಗದಲ್ಲಿ ಆಪ್ತ ಸ್ನೇಹಿತನಾಗಿ , ಕುಟುಂಬದಲ್ಲಿ ಅತ್ಯುತ್ತಮ ಸಂಬಂಧಿಯಾಗಿ , ಸಂಸಾರದಲ್ಲಿ ಆದರ್ಶ ಪತಿಯಾಗಿ , ಮಕ್ಕಳಿಗೆ ಜವಾಬ್ದಾರಿಯುತ ತಂದೆಯಾಗಿರುವ ಇವರ ವ್ಯಕ್ತಿತ್ವದ್ದು ಪಟ್ಟಿಯಲ್ಲ ಅಂಕಪಟ್ಟಿ ......
ಹಣಕ್ಕೆ ಆಸೆ ಪಟ್ಟವರಲ್ಲ , ಇನ್ನೊಬ್ಬರ ಏಳಿಗೆಗೆ ಅಸೂಯೆ ಪಟ್ಟವರಲ್ಲ .
ದೇವರ ಬಗ್ಗೆ ಮಾತಾಡುತ್ತಾರೆ ಆದರೆ ಧರ್ಮದ ಬಗ್ಗೆ ಮಾತನಾಡುವುದಿಲ್ಲ .
ರಾಜಕೀಯದ ಬಗ್ಗೆ ಮಾತಾಡುತ್ತಾರೆ ಆದರೆ ಯಾವುದೇ ಪಕ್ಷದ ಬಗ್ಗೆ ಮಾತನಾಡುವುದಿಲ್ಲ .
ಅನ್ಯ ಭಾಷೆಗಳ ಬಗ್ಗೆ ಬಾವ ಇರಿಸಿದ್ದರೆ ಮಾತೃಭಾಷೆಯ ಮೇಲೆ ಜೀವವೇ ಇರಿಸಿದ್ದಾರೆ .
ಕ್ಯಾಮರಾ ಎದುರಿಸಿದ್ದಾರೆಯೇ ಹೊರತು ವ್ಯಾಜ್ಯಗಳನ್ನು ಎದುರಿಸಿಲ್ಲ .
ಕೋಪವಿದೆ ..... ತಡಿಯುವುದನ್ನು ಕಲಿತಿದ್ದಾರೆ.
ರೋಷವಿದೆ ......ಕೆಲಸದಲ್ಲಿ ತೋರಿಸುತ್ತಾರೆ.
ಹಸಿವಿದೆ ......ಕಲಿಕೆಯಿಂದ ನೀಗಿಸಿಕೊಳ್ಳುತ್ತಾರೆ .‌
ಗೌರವವನ್ನು ....ನೀಡುತ್ತಾರೆ , ನಿರೀಕ್ಷಿಸುವುದಿಲ್ಲ.
ಆತ್ಮಗೌರವವನ್ನು ....ಉಳಿಸಿಕೊಳ್ಳುತ್ತಾರೆ ಕಳೆದುಕೊಳ್ಳುವುದಿಲ್ಲ .
ಬಲಹೀನತೆ ಇಲ್ಲದ ಬಲಾಡ್ಯ ನಟ ‌.‌
ಅಧಿಕಾರಕ್ಕೆ ಆಸೆ ಪಡದ ಅವಿರೋಧ ನಾಯಕ .
ಅಭಿಮಾನಿಗಳನ್ನು ಯಾವತ್ತಿಗೂ ನೋಯಿಸಿಲ್ಲ .
ಸಹಾಯವನ್ನು ಕರ್ತವ್ಯ ಅಂತಲೇ ಭಾವಿಸಿದ್ದಾರೆ .
ಸಿನಿಮಾವನ್ನು ಯಾವತ್ತೂ ಬೈದಿಲ್ಲ , ಅರ್ಧಕ್ಕೇ ಯಾವ ಸಿನಿಮಾವನ್ನೂ ಇವರಾಗಿ ನಿಲ್ಲಿಸಿಲ್ಲ , ಕೆಟ್ಟ ಪಾತ್ರಗಳನ್ನು ಪೋಷಿಸಿಲ್ಲ , ತಾನು ಇನ್ಮುಂದೆ ಸಿನಿಮಾಗಳಲ್ಲಿ ನಟಿಸಲ್ಲ ಅಂತ ಯಾವತ್ತೂ ಘೋಷಿಸಿಲ್ಲ .
ಎಂತಹ ಬಿಕ್ಕಟ್ಟೇ ಇರಲಿ ಬಿಕ್ಕಳಿಕೆಗೆ ನೀರು ಕುಡಿದಷ್ಟೇ ಸಲೀಸಾಗಿ ಬಗೆಹರಿಸಿಕೊಳ್ಳುತ್ತಾರೆ.
ಚಿತ್ರೊದ್ಯಮದಲ್ಲಿ ಕಲೆಗಾರನಾಗಿ ಮಾತ್ರವಲ್ಲ ಕಾವಲುಗಾರನಾಗಿ ನಿಂತಿದ್ದಾರೆ .
ಶಿಫಾರಸ್ಸುಗಳಿಗೆ , ಪರ್ಮಿಷನ್ಗಳಿಗೆ , ದೊಡ್ಡಸ್ತಿಕೆಗೆ ' ಶಿವರಾಜ್ ಕುಮಾರ್ ' ಅನ್ನೋ ಹೆಸರನ್ನ ತಾವು ಉಪಯೋಗಿಸುವುದಿರಲಿ ಬೇರೊಬ್ಬರೂ ದುರುಪಯೋಗ ಪಡಿಸಿಕೊಳ್ಳದಂತೆ ಕಾಪಾಡಿಕೊಂಡು ಬಂದಿದ್ದಾರೆ.
ಸಾಕ್ಷಾತ್ ಶಿವನ ಮೇಲೆಯೇ ದ್ವಿಪತ್ನಿಯರನ್ನು ಪಡೆದಿರುವ , ಹುಲಿ ಚರ್ಮ ಹೊಂದಿರುವ ಅಪವಾದವಿದೆ ಆದರೆ ಈ ಶಿವನ ಮೇಲೆ ಯಾವುದೇ ಸಣ್ಣ ಆರೋಪವಾಗಲಿ ಆಪಾದನೆಯಾಗಲಿ ಇಲ್ಲ.

ಕಡಲಾಳದ ಮುತ್ತಿನಲ್ಲಾದರೂ ಕಪ್ಪುಚುಕ್ಕೆ ಕಂಡಿರಬಹುದೇನೋ ಆದರೆ ಈ ಕರುನಾಡ ಒಡಲಿನ 'ಮುತ್ತು' ಕಲೆರಹಿತವಾದದ್ದು ಮತ್ತು ಅಷ್ಟೇ ಪರಿಶುದ್ಧವಾದದ್ದು .

ಹಾಗಂತ ಶಿವಣ್ಣ ಸಂತನೇನಲ್ಲ ತನ್ನ ಆಸೆ ಆಕಾಂಕ್ಷೆಗಳಿಗೆ 'ಸ್ವಂತ' .... ಎಲ್ಲಾ ರೀತಿಯ ಆಟಗಳನ್ನು ಆಡಿ'ಬಿಟ್ಟಿರುವ' ಕಿಲಾಡಿ . ಚಟಗಳನ್ನು ಕುದುರೆಗಳಂತೆ ಸಾಕಿದ್ದಾರೆ , ಪಳಗಿಸಿದ್ದಾರೆ , ಸವಾರಿ ಮಾಡಿ ಪುನಃ ಕಟ್ಟಿ ಹಾಕಿದ್ದಾರೆ.
ಒಳಗೆ ಹರಿಯುತ್ತಿರುವ ರಕ್ತ ಅಣ್ಣಾವ್ರದ್ದೇ ಆದರೂ ಹೊರಗೆ ಹರಿಸಿದ ಬೆವರು ಮಾತ್ರ ಇವರದ್ದೇ .

ಹಲವು ವ್ಯಕ್ತಿಗಳು ತಮ್ಮ ಆದರ್ಶಗಳನ್ನು ಪುಸ್ತಕಗಳ ಮೂಲಕ ಬರಹಗಳ ಮೂಲಕ ತೋರಿಸಿದ್ದರೆ ಶಿವಣ್ಣ ತಮ್ಮ ಬದುಕಿನ ಮೂಲಕ ತೋರಿಸಿದ್ದಾರೆ .
ಇದಿಷ್ಟೂ ಶಿವಣ್ಣನ ಹೊಗಳಿಕೆ ಅಲ್ಲ ಇದು ಅವರ ಇರುವಿಕೆ ಮತ್ತು ಗಳಿಸಿದ ಗಳಿಕೆ .
ಆನಂದ್ ಸಿನಿಮಾದಿಂದ ಆರಂಭಿಸಿ .... ನೂರಾರು ಸಿನಿಮಾಗಳು,ನೂರಾರು ಪಾತ್ರಗಳು,ನೂರಾರು ಸಂಘಗಳು,ನೂರಾರು ಪ್ರಶಸ್ತಿಗಳನ್ನು ಕಂಡ ಈ ನಟ ನೂರು ವರುಷ ಆನಂದದಿಂದ ಇರಲಿ ಎಂದು ಆಶಿಸುತ್ತೇನೆ -
ಮಾಸ್ತಿ ಉಪ್ಪಾರಹಳ್ಳಿ :kisslove

Sent from my vivo V3 using Tapatalk
 

Bhavani

aDDa Junior
ಟಾಪು ಟಾಪು ಅಂತ ಭ್ರಮೆನಲ್ಲಿ ಟಾಪಾಗಿದಿವಿ ಅನ್ಕೊಳೊರು ಒಂದ್ಸಲ ಕೇಳಿ‌‌...

ದರ್ಶನ್ ಇಂಡಸ್ಟ್ರಿಗೆ ಬಂದಿದ್ದು 2003 ರಲ್ಲಿ, ಸುದೀಪ್ ಇಂಡಸ್ಟ್ರಿಗೆ ಬಂದಿದ್ದು 2001 ರಲ್ಲಿ ಯಶ್ ಇಂಡಸ್ಟ್ರಿಗೆ ಬಂದಿದ್ದು 2007 ರಲ್ಲಿ... ನಾನ್ ಇದ್ನೆಲ್ಲಾ ಹೇಳ್ತಿರೋದು ಯಾಕಂದ್ರೆ ಇಂದು ಇಂಡಸ್ಟ್ರಿ ನಲ್ಲಿ ಇರೋ ಸ್ಟಾರ್ಸ್ ಎಲ್ಲಾ ಬಂದದ್ದು 2000 ರ ನಂತರ... 2000 ರ ನಂತರ ಈ ಜಗತ್ತಿಗೆ ಬಂದು ಕಣ್ಬಿಟ್ಟ ಮಕ್ಕಳಿಗೆ ಸಿನಿಮಾ ಅನ್ನೋ ಪದ ಅರ್ಥವಾಗೋ ಅಷ್ಟರಲ್ಲಿ ಕಡಿಮೆ ಅಂದ್ರು 10 ರಿಂದ 15 ವಯಸ್ಸಿಗೆ ತಲುಪಿರ್ಬೇಕು... ಅಷ್ಟರಲ್ಲಿ ಶಿವಣ್ಣ ಅನ್ನೋ ಶ್ರೇಷ್ಟ ನಟ ಬಾಕ್ಸ್ ಆಫೀಸ್ ನ ಬ್ರಹ್ಮನಾಗಿ ದಾಖಲೆಗಳ ಸೃಷ್ಟಿಕರ್ತನಾಗಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರ್ತಾರೆ....

ಶಿವಣ್ಣ ಇಂಡಸ್ಟ್ರಿ ಗೆ ಬಂದದ್ದು 1986 ರಲ್ಲಿ ಅಂದ್ರೆ ಶಿವಣ್ಣನಿಗೆ ಅಂದಿನ 15 ರಿಂದ 20 ವರ್ಷದ ಹುಡುಗರು ಮತ್ತು ಕನ್ನಡ‌ ಚಿತ್ರರಂಗದಲ್ಲಿ ಒಂದು ಹೊಸ ಮುಖವನ್ನು ನೋಡಲು ಕಾಯ್ತಿದ್ದ ಸಿನಿ ರಸಿಕರಿಗೆಲ್ಲಾ ಶಿವಣ್ಣ ನೆಚ್ಚಿನ ನಟನಾಗಿ ಅಭಿನಾನಿಗಳ ಹೃದಯ ಸಾಮ್ರಾಜ್ಯದ ಅರಸನಾಗ್ತಾರೆ... ರಾಜ್ ಕುಮಾರ್ ವಿಷ್ಣುವರ್ದನ್ ಅಂಬರೀಶ್ ಶಂಕರ್ ನಾಗ್ ರವಿಚಂದ್ರನ್ ಅನಂತ್ ನಾಗ್ ಶ್ರೀನಾಥ್ ರಂತಹ ಗಟಾನುಗಟಿಗಳ‌ ಮಧ್ಯೆ ಸತತವಾಗಿ ತನ್ನ 3 ಸಿನಿಮಾಗಳನ್ನು ಸಿಲ್ಬರ್ ಜೂಬ್ಲಿ ಆಚರಸಿಕೊಂಡ ಭಾರತೀಯ ಚಿತ್ರರಂಗದ ಏಕೈಕ ನಟ ಶಿವಣ್ಣ...

ಈಗ ನಾವು ಮಾತಾಡೋ ಬಾಕ್ಸ್ ಆಫೀಸ್, ಮೊದಲ ವಾರದ‌ ಕಲೆಕ್ಷನ್, ಕೋಟ್ಯಾಂತರ ಹಣ, ಅಂತರರಾಜ್ಯಗಳಲ್ಲಿ ಬಿಡುಗಡೆ, ದಾಖಲೆ ಕಲೆಕ್ಷನ್, 1 ವರ್ಷ ಓಡಿದ ಸಿನಿಮಾ ಹೀಗೆ ಮುಂತಾದ ಮಾತುಗಳು ಹುಟ್ಡಿದ್ದೇ ಶಿವಣ್ಣನ ಸಿನಿಮಾಗಳಿಂದ ಶಿವಣ್ಣನ ಅಭಿಮಾನಿಗಳಿಂದ....

ನಮ್ ಹೀರೋಗೆ YouTube Views ಜಾಸ್ತಿ, ನಮ್ ಹೀರೋಗೆ Facebook Likes ಜಾಸ್ತಿ ನಮ್ ಹೀರೋಗೆ Followers ಜಾಸ್ತಿ ಅಂತ ಹೊಡ್ಕೊಳೊ ತುಂಡೈಕ್ಳುಗಳು ಒಂದನ್ನ ಅರ್ಥ ಮಾಡ್ಕೊಬೇಕು ಸೋಶಿಯಲ್‌ ಮೀಡಿಯಾಗಳು ಹುಟ್ಟಿದ್ದು ನೀವು ಈ ಜಗತ್ತಿಗೆ ಕಳಚ್ಕೊಂಡು ನೀವು ಬೆಳೆದು ನಿಂತ ಮೇಲೆ ಅಂದ್ರೆ 7-8 ವರ್ಷಗಳಿಂದೀಚೆಗೆ... 1986 ರಲ್ಲಿದ್ದ 70% ಜನರು ಮತ್ತು ಶಿವಣ್ಣನ ಅಭಿಮಾನಿಗಳೆಲ್ಲಾ ಇಂದಿನ Child ಚಪಾತಿಗಳ ಜನಕರು... ಅಂತ ಎಷ್ಷೋ ಲಕ್ಷಾಂತರ ವಯಸ್ಕ Technology ಅರಿಯದ ಬಳಸದ ಶಿವಣ್ಣನ ಅಭಿಮಾನಿಗಳು ಇಂದು ತಮ್ನ ಹೆಂಡತಿ-ಮಕ್ಕಳೆಂಬ ಸಂಸಾರದ‌ ಜಂಜಾಟದಲ್ಲಿ ಜವಾಬ್ದಾರಿಯುತ ಜೀವನದಲ್ಲಿ ಅವರಿಗೆ‌‌ ನಾವು ನೀವು ಬಳಸೋ Facebook, Twitter, YouTube, ETC ಇವುಗಳ ಮೇಲೆ ಆಸಕ್ತಿ ಕಡಿಮೆ. 1st day 1st show ನೋಡೊಕೆ ಕೆಲಸ ಬಿಟ್ಟು‌ ಬಂದು ಕೂರೊ ನೋಡೊ ಸ್ಥಿತಿಯಲ್ಲಿ ಅವರಿರಲ್ಲ... ಹಾಗಾಗಿ 1st day collection, YouTube Views, Likes, Followers ಅಂತ Comparison ಮಾಡೋದ್ರಲ್ಲಿ ಅರ್ಥವಿಲ್ಲ... ಅಂತ ನೂರಾರು ದಾಖಲೆಗಳನ್ನೆಲ್ಲಾ‌ ನೋಡಿ ಮಾಡಿ ಇಂದು‌ ಮಕ್ಕಳ ಟೊಳ್ಳು ಹಾರಾಟ ಕೂಗಾಟಗಳನ್ನ ನೋಡಿ‌ ಹುಸಿನಗುವಿನಲ್ಲಿ ನಗೋರು ಶಿವಣ್ಣನ ಅಭಿಮಾನಿಗಳು.

80 ರ ದಶಕದ ನಟ
90 ರ ದಶಕದ‌ ನಟ
20 ರ ದಶಕದ ನಟ
Still 21ರ ದಶಕದ ನಟ

Classical Dancer ಆಗಿ ಬೆಳ್ಳಿ ತೆರೆಮೇಲೆ Dancing Star ಅನ್ನಿಸಿ‌ಕೊಂಡ ಏಕೈಕ‌ ನಟ

ಮೊದಲ 3 ಸಿನಿಮಾಗಳು ಸಿಲ್ವರ್ ಜೂಬ್ಲಿ

ಹೊರರಾಜ್ಯದಲ್ಲಿ 50 ದಿನಗಳನ್ನು ಪೂರೈಸಿದ ಮೊದಲ ಕನ್ನಡ ಸಿನಿಮಾ "ಆನಂದ್"

ಶಿವಣ್ಣನ ಹೇರ್ ಸ್ಟೈಲ್ ಅಂದಿನ ಆಲ್ ಟೈಮ್ ಫೇವರೇಟ್..

ಶಿವಣ್ಣನ "ಓಂ" ಚಿತ್ರವು 500+ ಬಾರಿ Re-Release ಆದ ಭಾರತದ ಏಕೈಕ ಸಿನಿಮಾ..

ರೌಡಿಸಂ ಚಿತ್ರಗಳಲ್ಲಿ ಲಾಂಗ್ (ಮಚ್ಚು) ಬಳಸಿದ ಮೊದಲ ಭಾರತೀಯ ನಟ..

"ಗಂಧದಗುಡಿ-2" ಮೈಸೂರಿನ 6 ಥಿಯೇಟರ್ ನಲ್ಲಿ ರಿಲೀಸ್ ಆದ ಮೊದಲ ಕನ್ನಡ ಚಿತ್ರ..

ಮೊದಲಬಾರಿ 10 ಕೋಟಿ ಇಂದ 25 ಕೋಟಿ‌ Budget ನ ಸಿನಿಮಾಗಳನ್ನು ಕೊಟ್ಟ ಮೊದಲ‌ ನಟ..

ರಾಜ್ ಕುಮಾರ್ ಅವರ ನಂತರ ಸರಾಸರಿ ಅತಿಹೆಚ್ಚು ಹಿಟ್ ಸಿನಿಮಾ‌ ಕೊಟ್ಟ ನಟ

"ಜನುಮದ‌ ಜೋಡಿ" ಒಂದು ವರ್ಷ 3 ಥಿಯೇಟರ್ಗಳಲ್ಲಿ‌ ಹೋಡಿದ ಮೊದಲ ಸಿನಿಮಾ

"ಜನುಮದ ಜೋಡಿ" ಅಮೇರಿಕಾದ ಯೂನಿವರ್ಸಿಟಿಯೊಂದರಲ್ಲಿ ಬಳಕೆಯಾಗುತ್ತಿರುವ ಮೊದಲ‌ ಕನ್ನಡ‌ ಸಿನಿಮಾ..

ಮೊದಲ ವಾರದಲ್ಲಿ 2.5 crore Collection ಮಾಡಿದ ಮೊದಲ ಕನ್ನಡ‌ ಸಿನಿಮಾ "AK.47"

16 ಥಿಯೇಟರ್ ಗಳಲ್ಲಿ 100 ದಿನಗಳನ್ನು ಪೂರೈಸಿದ ಮೊದಲ‌ ಕನ್ನಡ ಸಿನಿಮಾ "ಜೋಗಿ"

ಪೂರ್ವ ಬೆಂಗಳೂರಿನಲ್ಲಿ 100 ದಿನ‌ ಓಡಿದ ಸಿನಿಮಾ ಕೊಟ್ಟ ಮೊದಲ‌ ಏಕೈಕ ನಟ

ವಿಜಯಪುರ & ಗೌರಿಬಿದನೂರು (ತೆಲುಗು ಏರಿಯಾ) ಗಳಲ್ಲಿ 100 ದಿನ ಓಡಿದ ಸಿನಿಮಾ‌ ಕೊಟ್ಟ ಮೊದಲ ಏಕೈಕ ನಟ..

ಡಾ. ರಾಜ್ ಕುಮಾರ್ ನಂತರ ಅಭಿಮಾನಿಗಳಿಂದ ಅತಿ‌ಹೆಚ್ಚು ಬಿರುದುಗಳನ್ನು ಪಡೆದ ಏಕೈಕ ನಟ...

ತನ್ನ 54ನೇ ವಯಸ್ಸಿನಲ್ಲಿ ದೇಹವನ್ನು ದಂಡಿಸಿ ಸಿನಿಮಾಗೋಸ್ಕರ Six Pack ಮಾಡಿಕೊಂಡ ಮೊದಲ‌ ಭಾರತೀಯ‌ ನಟ...

"ಭಜರಂಗಿ" ಕೆ.ಜಿ.ರೋಡ್‌ನಲ್ಲಿ ಫ್ಯಾನ್ ಶೋ Trend ಆರಂಬಿಸಿದ ಮೊದಲ ಕನ್ನಡ‌ ಸಿನಿಮಾ...

ತನ್ನ ಎಲ್ಲಾ ಅಭಿಮಾನಿಗಳನ್ನು ಮನೆಯೊಳಗೆ ಬಿಟ್ಟುಕೊಳ್ಳೋ ಏಕೈಕ ಭಾರತೀಯ ನಟ..

ಸಿನಿಮಾಗಳಲ್ಲಿ ಶಿವಣ್ಣನ Entry ಗೆ ಚಿಲ್ಲರೆ ಕಾಯನ್ಸ್ ಎಸೆಯೋ ಟ್ರೆಂಡ್ ಹುಟ್ಟಿದ್ದು ಶಿವಣ್ಣನ ಅಭಿಮಾನಿಗಳಿಂದ...

Screen ಮುಂದೆ ಹೋಗಿ ಕುಣಿಯೋ Trend ಹುಟ್ಟಿದ್ದೆ ಶಿವಣ್ಣನ ಅಭಿಮಾನಿಗಳಿಂದ..

ಇಂತ ಸಾವಿರಾರು ಉದಾಹರಣೆಗಳು, ನೂರಾರು ದಾಖಲೆಗಳು ಸಿಕ್ತವೆ

4 SIMA Award
3 Best Actor Award
4 Film fare Award
2 Sica Spend jury Award
3 Hero Honda Express Award
2 Ujwal Express Award
1 Cine Express Award
1 Screen Award
1 Sirigannada Award
1 Hello Gandhinagara Award
1 Aryabhata Prashasthi
1 Cine Express Award ETV Award
1 Doctorate Award
1 Kohinoor of South India (London)
Etcಪ್
:love

Sent from my vivo V3 using Tapatalk
 
Top