KJP developments - U B Banakar joined KJP

Chanda Marutha

Administrator
Staff member
close friend who stays near haveri told that expected people for rally was 6 to 7 lakhs..But turnout was around 2 to 2.5 lakh people ...
To get the people they have distributed rs 250 to 300 with morning breakfast and afternoon lunch..
 

Smile

New Member
ಪೂಜಾಗಾಂಧಿ ಕೆಜೆಪಿ ಹಾದಿಯಲ್ಲಿ ರಕ್ಷಿತಾ ಪ್ರೇಮ್?

ರಾಜ್ಯ ರಾಜಕೀಯದಲ್ಲಿ ಮತ್ತೆ ಸುಂಟರಗಾಳಿ ಎದ್ದಿದೆ. ಇದು ಪ್ರಳಯದ ಸೂಚನೆಯೋ ಏನೋ ಗೊತ್ತಿಲ್ಲ. ಇದೇ ಸಂದರ್ಭದಲ್ಲಿ ಇನ್ನೊಂದು ಮಹತ್ವದ ಬೆಳವಣಿಗೆಗೂ ತೆರೆಮರೆ ಕಸರತ್ತುಗಳು ನಡೆಯುತ್ತಿವೆ. ತಾರೆ ರಕ್ಷಿತಾ ಪ್ರೇಮ್ ಬಗೆಗೆ ತೇಲಾಡುತ್ತಾ ಓಲಾಡುತ್ತಾ ತೂರಾಡಿ ಬಂದ ಸುದ್ದಿಯಿದು.

ಅದೇನೆಂದರೆ ಸ್ವಾಭಿಮಾನಿ ಶ್ರೀರಾಮುಲು ಅವರ ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಪ್ರಮುಖ ಆಕರ್ಷಣೆಯಾಗಿರುವ ತಾರೆ ರಕ್ಷಿತಾ ಪ್ರೇಮ್ ಅವರು ಕೆಜೆಪಿ ಪಕ್ಷಕ್ಕೆ ಸೇರಲಿದ್ದಾರೆ ಎಂಬುದು. ಈಗಾಗಲೆ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎನ್ನಲಾಗಿದೆ.

ಇನ್ನೇನು ಅಧಿಕೃತವಾಗಿ ಕೆಜೆಪಿಗೆ ಸೇರುವುದಷ್ಟೇ ಬಾಕಿ ಇದೆಯಂತೆ. ಈ ಬಗ್ಗೆ ರಕ್ಷಿತಾ ಅವರು ಒಂಥರಾ ಅಡ್ಡಗೋಡೆ ಮೇಲೆ ಫ್ಯಾನ್ (ಬಿಎಸ್ ಆರ್ ಪಕ್ಷದ ಚಿಹ್ನೆ) ತಿರುಗಿಸಿದ್ದಾರೆ. "ಮುಂದೇನಾಗುತ್ತದೋ ನನಗೂ ಗೊತ್ತಿಲ್ಲ. ರಾಜಕೀಯದಲ್ಲಿ ಪಕ್ಷಾಂತರ ಹೊಸದೇನಲ್ಲ" ಎಂದಿದ್ದಾರೆ.

ಅವರೂ ಒಗಟೊಗಟಾಗಿ ಮಾತನಾಡುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ. ಶ್ರೀರಾಮುಲು ಅವರ ಪಕ್ಷದಲ್ಲೇ ರಕ್ಷಿತಾ ರಾಜಕೀಯ ಓನಾಮಗಳನ್ನು ಕಲಿತಿದ್ದು. ಅಲ್ಲಿ ಕಲಿತ ಪಾಠಗಳನ್ನು ಕೆಜೆಪಿಯಲ್ಲಿ ಆಚರಣೆಗೆ ತರಲಿದ್ದಾರೆ ಎನ್ನುತ್ತವೆ ಮೂಲಗಳು.

ತಮ್ಮ ಗ್ಲಾಮರ್ ಹಾಗೂ ಭಾಷಣಗಳ ಮೂಲಕ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲೂ ಒಂಚೂರು ಯಶಸ್ವಿಯಾಗಿದ್ದರು ರಕ್ಷಿತಾ. ಮುಂಬರುವ ವಿಧಾನಸಭೆ ಚುನಾವಣೆಗೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು.

ಇತ್ತೀಚೆಗಷ್ಟೇ ನಟಿ ಪೂಜಾಗಾಂಧಿ ಅವರು ಜೆಡಿಎಸ್ ತೊರೆದು ಕೆಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಅದೇ ಹಾದಿಯಲ್ಲಿ ರಕ್ಷಿತಾ ಪ್ರೇಮ್ ಅವರೂ ಇದ್ದಾರಾ? ಉತ್ತರ ಸಿಗಬೇಕಾದರೆ ಸ್ವಲ್ಪ ದಿನ ಕಾಯಲೇಬೇಕು.
 
Veerbasant reddy, former mla of yadgir constituentcy who had won in 2004 has joined KJP leaving BJP.He is the second important politisian after venkat reddy mudnal of gurumitkal to join KJP here.
 
Top