Mr. Anand in new role!! All the best!!!

Vasanth

New Member
ಆನಂದ್ ಎಂದರೆ ಥಟ್ಟನೇ ಅರ್ಥವಾಗಲಿಕ್ಕಿಲ್ಲ. ಆದರೆ ಗೌರಿ ಗಣೇಶ ಚಿತ್ರದ ಬಾಲನಟ ಎಂದರೆ ಓ ಆ ಹುಡುಗನಾ ಎನ್ನುತ್ತಾರೆ ಚಿತ್ರರಸಿಕರು. ಮಾಸ್ಟರ್ ಆನಂದ್ ಈಗ ಮಿಸ್ಟರ್ ಆನಂದ್ ಆಗಿ ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಎಲ್ಲರ ಕಣ್ಣಲ್ಲಿ ಗೌರಿ ಗಣೇಶ ಚಿತ್ರದ ಮಾಸ್ಟರ್ ಆನಂದ್ ಚಿತ್ರವೇ ಹಸಿರಾಗಿದೆ.

ಗೌರಿ ಗಣೇಶ ಚಿತ್ರ ಸೂಪರ್ ಹಿಟ್ ಆಗುವಲ್ಲಿ ಆ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನದ ಜೊತೆಗೆ ಕಲಾವಿದರೆಲ್ಲರ ಅಭಿನಯ ಅದರಲ್ಲೂ ಆನಂದ್‌ರವರ ಅಭಿನಯ ಬಹುತೇಕ ಕಾರಣವಾಗಿತ್ತು. ಚುರುಕಾದ ಅಭಿನಯ ಮತ್ತು ಅಷ್ಟೇ ನಿಖರವಾಗಿ ವಾಯ್ಸ್ ಡಬ್ಬಿಂಗ್ ಮಾಡುವುದು ಹುಡುಗಾಟದ ಕೆಲಸವಲ್ಲ. ಆದರೆ ಅದನ್ನು ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸಮರ್ಥವಾಗಿ ನಿಭಾಯಿಸಿದ್ದು ಆನಂದ್ ಹೆಗ್ಗಳಿಕೆ.

ವಯಸ್ಸಿಗೆ ಬಂದ ಮೇಲೆ ಅಲ್ಲೊಂದು ಇಲ್ಲೊಂದು ಪಾತ್ರಗಳಲ್ಲಿ ಇಲ್ಲವೇ ನಾಯಕನ ಗೆಳೆಯರ ಪಾತ್ರದಲ್ಲಿ ನಟಿಸುತ್ತಿದ್ದ ಆನಂದ್ ಈಗ ತಾವೇ ನಿರ್ದೇಶಕರ ಪಟ್ಟವನ್ನು ಏರುತ್ತಿದ್ದಾರೆ. ಬೇರೆಯವರು ಅಭಿನಯಕ್ಕೆ ಪ್ರೋತ್ಸಾಹ ಕೊಡದಿದ್ದಾಗ ತಮ್ಮ ಭವಿಷ್ಯವನ್ನು ತಾವೇ ನಿರ್ಮಿಸಿಕೊಳ್ಳಬೇಕು ಎಂಬುದು ಅವರ ಇರಾದೆಯಿರಬಹುದೇನೋ? ತಮ್ಮ ನಿರ್ದೇಶನದ ಚಿತ್ರಕ್ಕೂ ಹಾಸ್ಯಕಥೆಯನ್ನೇ ಆನಂದ್ ಆರಿಸಿಕೊಂಡಿದ್ದಾರಂತೆ.ಆನಂದ್‌ಗೆ ಆಶೀರ್ವದಿಸಲು ಇದು ಸಕಾಲವಲ್ಲವೇ?
 
ooh... Master Anand Nirdeshanakke... :o

Adrallu Haasya chitra nirdeshana... olledaagali.. Shivu adda... kade indha all the best..

I think.. he has enogh talent to showcase... his comedy timing is really good as a actor... so we can expect something good.. :)
 
kannadiga

Moderator
Vasanth said:
ಆನಂದ್ ಎಂದರೆ ಥಟ್ಟನೇ ಅರ್ಥವಾಗಲಿಕ್ಕಿಲ್ಲ. ಆದರೆ ಗೌರಿ ಗಣೇಶ ಚಿತ್ರದ ಬಾಲನಟ ಎಂದರೆ ಓ ಆ ಹುಡುಗನಾ ಎನ್ನುತ್ತಾರೆ ಚಿತ್ರರಸಿಕರು. ಮಾಸ್ಟರ್ ಆನಂದ್ ಈಗ ಮಿಸ್ಟರ್ ಆನಂದ್ ಆಗಿ ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಎಲ್ಲರ ಕಣ್ಣಲ್ಲಿ ಗೌರಿ ಗಣೇಶ ಚಿತ್ರದ ಮಾಸ್ಟರ್ ಆನಂದ್ ಚಿತ್ರವೇ ಹಸಿರಾಗಿದೆ.ಗೌರಿ ಗಣೇಶ ಚಿತ್ರ ಸೂಪರ್ ಹಿಟ್ ಆಗುವಲ್ಲಿ ಆ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನದ ಜೊತೆಗೆ ಕಲಾವಿದರೆಲ್ಲರ ಅಭಿನಯ ಅದರಲ್ಲೂ ಆನಂದ್‌ರವರ ಅಭಿನಯ ಬಹುತೇಕ ಕಾರಣವಾಗಿತ್ತು. ಚುರುಕಾದ ಅಭಿನಯ ಮತ್ತು ಅಷ್ಟೇ ನಿಖರವಾಗಿ ವಾಯ್ಸ್ ಡಬ್ಬಿಂಗ್ ಮಾಡುವುದು ಹುಡುಗಾಟದ ಕೆಲಸವಲ್ಲ. ಆದರೆ ಅದನ್ನು ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸಮರ್ಥವಾಗಿ ನಿಭಾಯಿಸಿದ್ದು ಆನಂದ್ ಹೆಗ್ಗಳಿಕೆ.

ವಯಸ್ಸಿಗೆ ಬಂದ ಮೇಲೆ ಅಲ್ಲೊಂದು ಇಲ್ಲೊಂದು ಪಾತ್ರಗಳಲ್ಲಿ ಇಲ್ಲವೇ ನಾಯಕನ ಗೆಳೆಯರ ಪಾತ್ರದಲ್ಲಿ ನಟಿಸುತ್ತಿದ್ದ ಆನಂದ್ ಈಗ ತಾವೇ ನಿರ್ದೇಶಕರ ಪಟ್ಟವನ್ನು ಏರುತ್ತಿದ್ದಾರೆ. ಬೇರೆಯವರು ಅಭಿನಯಕ್ಕೆ ಪ್ರೋತ್ಸಾಹ ಕೊಡದಿದ್ದಾಗ ತಮ್ಮ ಭವಿಷ್ಯವನ್ನು ತಾವೇ ನಿರ್ಮಿಸಿಕೊಳ್ಳಬೇಕು ಎಂಬುದು ಅವರ ಇರಾದೆಯಿರಬಹುದೇನೋ? ತಮ್ಮ ನಿರ್ದೇಶನದ ಚಿತ್ರಕ್ಕೂ ಹಾಸ್ಯಕಥೆಯನ್ನೇ ಆನಂದ್ ಆರಿಸಿಕೊಂಡಿದ್ದಾರಂತೆ.ಆನಂದ್‌ಗೆ ಆಶೀರ್ವದಿಸಲು ಇದು ಸಕಾಲವಲ್ಲವೇ?
Very good news...his performance in Gowri Ganesha is awesome, all the best Anandoo...shivu adda is always with you. :) :) :)
 
Top