Power Star Puneeth Rajkumar : Child Artist, Actor, Playback Singer, Anchor , Television Presenter

venki

Venki
ಲಾವಿದನ ಸಂಕಷ್ಟಕ್ಕೆ ಸ್ಪಂದಿಸಿದ 'ರಾಜಕುಮಾರ'...
^^^^^^^^^^^^^^^^^^^^^^^^^^^^^^^^^^^^^^^^^^^^^^^^
ಹಿರಿಯ ಬ್ಯಾನರ್ ಕಲಾವಿದ ಚಿನ್ನಪ್ಪ ಅವರ ಆರ್ಥಿಕ ಸಮಸ್ಯೆಯ ಬಗ್ಗೆ ವಿವರ ತಿಳಿದ ತಕ್ಷಣವೇ ಕನ್ನಡದ 'ಪವರ್'ಸ್ಟಾರ್' ಪುನೀತ್ ರಾಜಕುಮಾರ್ ಸ್ಪಂದಿಸಿದ್ದಾರೆ. ಈ ಬಗ್ಗೆ ಚಿನ್ನಪ್ಪ ಅವರ ಪುತ್ರ ಕೃಷ್ಣ ನನಗೆ ಫೋನ್ ಮಾಡಿ ಹೇಳಿದ್ದಿಷ್ಟು : 'ಅಣ್ಣಾ, ನಮ್ಮ ಸಂಕಷ್ಟದ ವಿವರವನ್ನು ತಿಳಿದುಕೊಂಡ ಪುನೀತ್ ರಾಜಕುಮಾರ್ ಇಂದು ಸಂಜೆ ಐವತ್ತು ಸಾವಿರ ರೂಪಾಯಿ ಕ್ಯಾಶ್ ಕಳಿಸಿ ಕೊಟ್ಟಿದ್ದಾರೆ. ಅವರ ಋಣವನ್ನು ಹೇಗೆ ತೀರಿಸಲಿ ಅಣ್ಣಾ? 'ಮನುಷ್ಯರಾದವರ ಎಲ್ಲಾ ಸಂಕಷ್ಟಗಳ ಕಡೆ ಗಮನ ಕೊಡಲು ಸಾಕ್ಷಾತ್ ದೇವರಿಗೇ ಕೆಲವೊಮ್ಮೆ ಬಿಡುವಿರುವುದಿಲ್ಲ. ಇಂಥಾ ಸಂದರ್ಭಗಳಲ್ಲಿ ಸಹಾಯ ಮಾಡಲು ತನ್ನ ಪರವಾಗಿ ಮನುಷ್ಯನನ್ನೇ ಕಳಿಸಿಕೊಡುತ್ತಾನಂತೆ. ಮನುಷ್ಯ ದೇವರಾಗುವುದು ಈಗಲೇ...' - ಎಂದು ನಮ್ಮಪ್ಪ ಆಗಾಗ ಹೇಳುವುದಿದೆ. ಈ ಮಾತು ಈಗ ನಿಜವಾಗಿದೆ. ಪುನೀತ್ ಸರ್ ಬರೀ ಮನುಷ್ಯರಲ್ಲ, ನಮ್ಮ ಪಾಲಿಗೆ ಸಾಕ್ಷಾತ್ ದೇವರು...' - ಎಂದು ಹೇಳಿ ಕೃಷ್ಣ ಕಣ್ಣೀರಿಟ್ಟದ್ದನ್ನು ಮರೆಯೋದುಂಟಾ?
ಮೊನ್ನೆ ತಾನೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬರೋಬ್ಬರಿ ಐವತ್ತು ಲಕ್ಷ ರೂಪಾಯಿಗಳ ದೇಣಿಗೆ ನೀಡಿದ ಪುನೀತ್ ರಾಜಕುಮಾರ್ ಈಗ ಚಿನ್ನಪ್ಪ ಕುಟುಂಬಕ್ಕೆ ಐವತ್ತು ಸಾವಿರ ರೂಪಾಯಿಗಳ ಸಹಾಯ ನೀಡಿ ಔದಾರ್ಯ ಮೆರೆದಿದ್ದಾರೆ. ನನ್ನಂಥೋರ ಗಮನಕ್ಕೆ ಬಾರದೇ ಅವೆಷ್ಟು ಅಸಹಾಯಕರಿಗೆ ದಾನ ಧರ್ಮ ಮಾಡಿದ್ದಾರೋ ಪುನೀತ್ ರಾಜಕುಮಾರ್? ಕನ್ನಡ ಚಿತ್ರರಂಗದಲ್ಲಿ ಅವರು ಇನ್ನಷ್ಟು ಬೆಳಗಲಿ ಎಂದು ಹಾರೈಸೋದಷ್ಟೇ ಪ್ರಾರ್ಥನೆ...
ಕೃಪೆ.. ಹಿರಿಯ ಪತ್ರಕರ್ತರು
ಗಣೇಶ್ ಕಾಸರಗೋಡು
Image may contain: one or more people and beard
 
Top